ಬೆಂಗಳೂರು: ಎಸ್ ಟಿ ಸೋಮಶೇಖರ್ ಹೆಬ್ಬಾರ್ ಉಚ್ಚಾಟನೆ ಆಗುತ್ತೆ ಎಂದು ಛಲವಾದಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರತಿಕ್ರಿಯೇ ನೀಡಿದ್ದಾರೆ. ಎಲ್ಲಾ ಮಾಹಿತಿ ಪಡೆದು, ಕೇಂದ್ರ ನಾಯಕರು ತೀರ್ಮಾನ ಮಾಡ್ತಾರೆ.
ನಾವೆಲ್ಲಾ ಒಟ್ಟಿಗೆ ಹೋಗಬೇಕು ಕಾಂಗ್ರೆಸ್ ನ ಎದುರಿಸಬೇಕು ಅನ್ನೊದು ನಮ್ಮ ಉದ್ದೇಶ ಎಂದು ಹೇಳಿದರು. ಪಾರ್ಟಿ ನಮ್ಮ ತಾಯಿ ಇದ್ದಾಗೆ, ಪಕ್ಷದ ವಿರುದ್ದ ಯಾವುದೇ ಹೇಳಿಕೆ ಕೊಡಬಾರದು ಎಂದು ಮನವಿ ಮಾಡ್ತಿವಿ ಎಂದರು. ಇನ್ನೂ ಮತ್ತೆ ರೆಬಲ್ ನಾಯಕರ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲವನ್ನ ಕೇಂದ್ರದ ನಾಯಕರು ಗಮನ ಮಾಡ್ತಿದ್ದಾರೆ.
ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಮಲಗಿ: ಜೀವನದಲ್ಲಿ ಅನಿರೀಕ್ಷಿತ ಅದೃಷ್ಟ ನಿಮ್ಮದಾಗುತ್ತೆ.!
ನನಗೆ ಸಭೆ ಬಗ್ಗೆ ಮಾಹಿತಿ ಇಲ್ಲ, ಉಚ್ಚಾಟನೆ ವಾಪಸ್ಸು ಪಡೆಯುವುದು ಕೇಳೊದಕ್ಕೆ ಕಾರ್ಯಕರ್ತರಿಗೆ ಹಕ್ಕಿದೆ. ಪಕ್ಷದ ವಿರುದ್ದ ಯಾರು ಮಾತಾಡಬಾರದು ಎಂದು ಮನವಿ ಮಾಡಿದ್ದಾರೆ.
ಯತ್ನಾಳ್ ಉಚ್ಚಾಟನೆ ವಾಪಸ್ಸು ಒಡೆಯಬೇಕೆಂದು ಜಯಮೃತ್ಯುಂಜಯ ಸ್ವಾಮೀಜಿಗಳ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಆಶ್ಚರ್ಯವಾಗಿದೆ ನಮ್ಮದು ಪೊಲಿಟಿಕಲ್ ಪಾರ್ಟಿ, ಅವರದ್ದು ಮಠ. ಆದ್ದರಿಂದ ಮತ್ತೊಮ್ಮೆ ಜಯಮೃತ್ಯುಂಜಯ ಸ್ವಾಮಿಜಿಗಳು ಇದರ ಬಗ್ಗೆ ವಿಮರ್ಶೆ ಮಾಡಿಕೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.