ಬೆಳಗಾವಿ : ಇಲ್ಲಿ ಹಿಂದುಗಳೇ ಮುಸ್ಲಿಂ ಮೂಲ ದೇವರ ಆರಾಧಕರು, ನಾಡಿನಲ್ಲಿ ಎಷ್ಟೇ ಕೋಮು ಸಂಘರ್ಷಗಳಾದ್ರೂ, ಇಲ್ಲಿ ಮಾತ್ರ ಅಂತಹ ಅಹಿತಕ್ಕೆ ಸ್ಥಳವಿಲ್ಲ, ಎಲ್ಲರೂ ಏಕತೆಯ ಭಾವನೆಯಿಂದ ನಡೆದುಕೊಂಡು ಮಾದರಿ ಗ್ರಾಮವಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಲ್ಲೂತ್ತಿ ಅನ್ನೋ ಪುಟ್ಟ ಗ್ರಾಮದಲ್ಲಿ ಹಿಂದೂ ಜನಾಂಗದ ಮಧ್ಯೆ ಕೇವಲ ಒಂದೇ ಒಂದು ಮುಸ್ಲಿಂ ಕುಟುಂಬ ಕುಟುಂಬ ಮಾತ್ರ ವಾಸಿಸುತ್ತದೆ . ಆದರೆ ಇಲ್ಲಿ ಮುಸ್ಲಿಂ ಮನೆತನವನ್ನು ಎಲ್ಲರು ಅತಿ ಗೌರವದಿಂದ ಕಾಣುತ್ತಾರೆ .ಅದರಂತೆ ಹಿಂದೂ ಮುಸ್ಲಿಂ ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಹಬ್ಬ ಹರಿದಿನಗಳ ಜೊತೆ ಜಾತ್ರೆ ಉತ್ಸವಗಳನ್ನ ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ.
ಸಾಮಾಜಿಕ ಕಾರ್ಯಕರ್ತೆ ಜುಬೇದಾ ನಧಾಫ್ ಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ
ಅದರಂತೆ ಗ್ರಾಮದಲ್ಲಿ ಮುಸ್ಲಿಂ ದೇವರಲ್ಲಿ ಒಬ್ಬರಾದ ಮೀರಾಸಾಬ್ ಉರುಸ್ ಹಬ್ಬವನ್ನು ಇಡೀ ಗ್ರಾಮವೇ ಅತ್ಯಂತ ವಿಜ್ರಂಭಣೆಯಿಂದ ಆಚರಣೆ ಮಾಡುತ್ತಾರೆ. ವರ್ಷದ ಯುಗಾದಿ ಹಬ್ಬದ ಮೊದಲು ಈ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ. ಉರುಸ್ ಹಬ್ಬದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ನೈವೈದ್ಯ ಹಿಡಿದು ಎರಡು ದಿನಗಳ ಕಾಲ ಅದ್ದೂರಿಯಾಗಿ ಹಬ್ಬವನ್ನ ಆಚರಣೆ ಮಾಡುತ್ತಾರೆ.
ಒಟ್ಟಾರೆಯಾಗಿ ಗಡಿ ಭಾಗದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತವಾಗಿ ಆಚರಣೆ ಮಾಡುವ ಈ ಹಬ್ಬ ಎಲ್ಲರ ಗಮನ ಸೆಳೆಯುತ್ತದೆ.