ಉತ್ತರ ಕನ್ನಡ :ಕಾಶ್ಮೀರ ದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ನರಮೇದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕರಾವಳಿ ಕಾವಲು ಪಡೆ ಹಾಗೂ ಭಾರತೀಯ ತಟರಕ್ಷಕ ದಳ ಅಲರ್ಟ್ ಆಗಿದ್ದು ಎಲ್ಲೆಡೆ ತಪಾಸಣೆ ನಡೆಸಲಗ್ತಾ ಇದೆ ಈ ಕುರಿತು ಒಂದು ಸ್ಟೋರಿ ಇಲ್ಲಿದೆ..
ಜಾತಿಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೂ ನಡೆಯಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ!
ಸದ್ಯ ಎಲ್ಲೇಲ್ಲೂ ಸುಡುಬಿಸಿಲು, ಮಕ್ಕಳಿಗೆ ಬೇಸಿಗೆ ರಜೆ.. ಈ ಹಿನ್ನಲೆಯಲ್ಲಿ ಬಹುತೇಕ ಪ್ರವಾಸಿ ತಾಣಗಳು ಈಗ ಫುಲ್ ರಶ್.. ಸದ್ಯ ಉತ್ತರ ಕನ್ನಡ ಜಿಲ್ಲೆಗೂ ಸಹ ಸಾವಿರಾರು ಪ್ರವಾಸಿಗರು ಆಗಮಿಸ್ತಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಮುರುಡೇಶ್ವರ, ಗೋಕರ್ಣ ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಮಾಹಿತಿ ಕಲೆ ಹಾಕುತಿದ್ದು , ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಿ ಬರುವ ಪ್ರವಾಸಿಗರ ಮಾಹಿತಿ ಪಡೆಯಲಾಗುತ್ತುದೆ. ಇನ್ನು ಕರಾವಳಿ ಕಾವಲುಪಡೆ ಹಾಗೂ ಭಾರತೀಯ ತಟರಕ್ಷಣಾ ಪಡೆಗಳು ಕರಾವಳಿ ಭಾಗದಲ್ಲಿ ಶತ್ರಗಳು ಒಳ ನುಗ್ಗದಂತೆ ತಡೆಯಲು ಬೋಟುಗಳ ತಪಾಸಣೆ ನಡೆಸುತಿದ್ದು, ಕರಾವಳಿ ಭಾಗದಲ್ಲಿ ಬಿಗಿ ತಪಾಸಣೆ ಕೈಗೊಂಡಿದೆ.ಕಡಲಿನಲ್ಲಿ ಮೀನುಗಾರಿಕೆ ಮಾಡುವ ಮೀನುಗಾರರಿಗೆ ಅಪರಿಚಿತ ಬೋಟ್ ಗಳ ತೀವ್ರ ತಪಾಸಣೆ ನಡೆಸಲಾಗ್ತಿದೆ.
ನ್ನೂ ಜಿಲ್ಲೆಯಲ್ಲಿ ಏಷ್ಯಾದಲ್ಲಿಯೇ ಅತಿದೊಡ್ಡ ಕದಂಬ ನೌಕಾನೆಲೆ ಇದ್ದು ಇದಲ್ಲದೇ ಕೈಗಾ ಅಣುವಿದ್ಯುತ್ ಸ್ಥಾವರ ಸಹ ಕಾರವಾರದಲ್ಲಿದೆ. ಎರಡು ಸೂಕ್ಷ್ಮ ಪ್ರದೇಶವಾಗಿದ್ದು ಈ ಹಿಂದಿನಿಂದಲೂ ಎರಡು ಸ್ಥಳದಲ್ಲಿ ಬಿಗಿ ಭದ್ರತೆ ಮಾಡಿಕೊಂಡು ಬರಲಾಗಿದೆ. ಒಂದೊಮ್ಮೆ ಭಾರತ ಪಾಕಿಸ್ತಾನದ ನಡುವೆ ಯುದ್ದ ನಡೆದರೆ, ಇಲ್ಲವೇ ಉಗ್ರರು ದೇಶದೊಳಗೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾದರೆ ಈ ಎರಡು ಸ್ಥಳದ ಮೇಲೆ ಕಣ್ಣಿಡುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲೆಯಲ್ಲಿ ಭದ್ರತೆಗೆ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ಕಣ್ಣಿಡುವ ಕಾರ್ಯಕ್ಕೆ ಇಳಿದಿದ್ದಾರೆ.ಈಗಾಗಲೇ ಪಹಲ್ಗಾಮ್ ಘಟನೆ ನಂತರದಲ್ಲಿ ಜಿಲ್ಲೆಯ ಅರಬ್ಬೀ ಸಮುದ್ರದಲ್ಲಿ ಕರಾವಳಿ ಕಾವಲು ಪಡೆ ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಸಮುದ್ರದಲ್ಲಿ ಮೀನುಗಾರಿಗೆ ನಡೆಸುವ ಪ್ರತಿಯೊಬ್ಬ ಮೀನುಗಾರರ ಮಾಹಿತಿಯನ್ನ ಸಂಗ್ರಹಿಸಿ, ದಾಖಲೆ ಪರಿಶಿಲನೆ ನಡೆಸುತ್ತಿದೆ.ಇಂದಿನಿಂದ ಎರಡು ದಿನಗಳ ಕಾಲ ಕಾರವಾರದ ಕದಂಬ ನೌಕಾದಳದವರು ಸಮುದ್ರದಲ್ಲಿ ಆಪರೇಷನಲ್ ಎಕ್ಸಸೈಸ್ ನಡೆಸಲಿದ್ದು ಮೀನುಗಾರರಿಗೆ ಎಚ್ಚರಿಕೆ ನೀಡಿಲಾಗಿದೆ.
ಒಟ್ಟಾರೆ ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ಬೆನ್ನಲ್ಲೆ ಇದೀಗ ಕರಾವಳಿ ಜಿಲ್ಲೆಯ ಉತ್ತರಕನ್ನಡಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಿದ್ದು, ಒಂದು ವೇಳೆ ನುಸುಳುಕೋರರೇನಾದ್ರೂ ಕರಾವಳಿ ಪ್ರವೇಶಿಸಿದ್ರೆ ಹೊಡಿದುರುಳಿಸಲು ಸನ್ನದ್ದರಾಗಿರೊದು ಮಾತ್ರ ಸತ್ಯ.