ಮಂಡ್ಯ: ಹಿಂದೂ ಕಾರ್ಯಕರ್ತನ ಹತ್ಯೆಗೆ ಕಾರಣ ಗೊತ್ತಿಲ್ಲ ಆದರೆ ತನಿಖೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಂಡ್ಯದ ತೂಬಿನಕೆರೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಈ ಹತ್ಯೆ ಯಾಕೆ ನಡೆದಿದೆ ಗೊತ್ತಿಲ್ಲ. ಮೃತ ವ್ಯಕ್ತಿ ರೌಡಿಶೀಟರ್ ಅಂತ ಹೇಳುತ್ತಿದ್ದಾರೆ. ಹಂತಕರು ಯಾರೇ ಆಗಿದ್ರು ಕೂಡಲೇ ಕ್ರಮ ಆಗಬೇಕು. ಶೀಘ್ರ ಆರೋಪಿಗಳ ಪತ್ತೆಗೆ ಕ್ರಮವಹಿಸಬೇಕು. ಇಂತಹ ಘಟನೆಗಳಿಗಾಗಿಯೇ ಬಿಜೆಪಿಯವರು ಕಾಯುತ್ತಿದ್ದಾರೆ ಎಂದು ಕಿಡಿಕಾರಿದರು. ಪಹಲ್ಗಾಮ್ ದಾಳಿ ವೇಳೆ 26 ಜನ ಮೃತಪಟ್ಟರು. ಪಹಲ್ಗಾಮ್‌ಗೆ ಪ್ರಧಾನಮಂತ್ರಿ ಹೋಗಿದ್ದಾರ? ಆ ಘಟನೆಗೆ ಭದ್ರತಾ ವೈಫಲ್ಯ ಕಾರಣ ಅಲ್ಲವಾ..? ನೂರಾರು ಪ್ರವಾಸಿಗರು ಹೋಗುವ ಜಾಗದಲ್ಲಿ ಪೊಲೀಸರು ಇಲ್ಲ, ಸೆಕ್ಯೂರಿಟಿ ಕೂಡ ಇಲ್ಲ ಎಂದು ಪ್ರಶ್ನಿಸಿದರು.
ಇನ್ನೂ ಸ್ಪೀಕರ್ ಯ.ಟಿ.ಖಾದರ್‌ಗೆ ಬೆದರಿಕೆ ಕರೆ ಬಂದ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೂ ಬೆದರಿಕೆ ಕರೆಗಳು ಬರುತ್ತವೆ, ಬಂದಿವೆ. ಸ್ಪೀಕರ್‌ಗೆ ಬಂದ ಬೆದರಿಕೆ ಕರೆ ಬಗ್ಗೆ ಪತ್ತೆ ಹಚ್ಚಿ ಕ್ರಮವಹಿಸಲು ಸೂಚಿಸಲಾಗಿದೆ ಎಂದರು.
ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹತ್ಯೆ ; ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ
ಇದೇ ವೇಳೆ RSS ಯಾವತ್ತು ಮೀಸಲಾತಿ ಒಪ್ಪಿಲ್ಲ. ವರದಿ ಜಾರಿಗೆ ಕಳೆದ 2 ವರ್ಷಗಳಿಂದ ರಾಹುಲ್ ಗಾಂಧಿ ಒತ್ತಾಯಿಸಿದರು. ಅದಕ್ಕೆ ಪ್ರಣಾಳಿಕೆಯಲ್ಲಿ ಸೇರಿಸಿದ್ದೆವು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು. 50% ಸೀಲಿಂಗ್ ತೆಗೆಯಿರಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತನ್ನಿ ಎಂದು ಮೋದಿಯವ್ರಿಗೆ ಒತ್ತಾಯಿಸುತ್ತೇನೆ. ಯಾವಾಗ ಜಾರಿಗೆ ಮಾಡ್ತೀರಾ ಎಂಬುದನ್ನು ಖಚಿತವಾಗಿ ಹೇಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.