ಬೆಂಗಳೂರು:- ಮಂಗಳೂರಿನಲ್ಲಿ ಗುರುವಾರ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಭೀಕರ ಕೊಲೆ ಪ್ರಕರಣವನ್ನು ಪರಿಷತ್ ಶಾಸಕ ಟಿಎ ಶರವಣ ಖಂಡಿಸಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹತ್ಯೆ ; ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕಡಲ ತೀರದಲ್ಲಿ ಮುಸ್ಲಿಂ ಮೂಲಭೂತವಾದ ಮತ್ತೆ ಹೆಡೆ ಎತ್ತಿದ್ದು, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಕಗ್ಗೊಲೆ ಗೃಹ ಇಲಾಖೆಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಆಗಿದೆ ಎಂದರು.
ಮಂಗಳೂರು ಬರ್ಬರ ಹತ್ಯಾಕಾಂಡವನ್ನು ಮತ್ತು ಪಾಕಿಸ್ತಾನ ಪರ ಘೋಷಣೆ ಪ್ರಕರಣವನ್ನು ಬಲವಾಗಿ ಖಂಡಿಸಿರುವ ಶರವಣ ಕರ್ನಾಟಕ ಭಾರತದಲ್ಲಿ ಇದೆಯಾ ಅಥವಾ ಪಾಕಿಸ್ತಾನದಲ್ಲಿ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ ಇಲ್ಲ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿ ಇಲ್ಲ. ಹಿಂದೂ ಸಮುದಾಯಕ್ಕೆ ರಕ್ಷಣೆ ಇಲ್ಲ. ಪೊಲೀಸ್ ವ್ಯವಸ್ಥೆ ಕುಸಿದು ಬಿದ್ದಿವೆ. ಕಾಂಗ್ರೆಸ್ ಗುಂಪುಗಾರಿಕೆಯಿಂದ ಅರಾಜಕತೆ ಉಂಟಾಗಿದೆ. ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಕೆಂಡ ಕಾರಿದ್ದಾರೆ.
ಕರ್ನಾಟಕದಲ್ಲಿ ಜಾತಿ ಧರ್ಮದ ಮೇಲೆ ಸಮುದಾಯವನ್ನು ಒಡೆಯುವ ಕಾಂಗ್ರೆಸ್ ನೀತಿಯೇ ಈ ರಕ್ತದೋಕುಳಿ ಗೆ ಕಾರಣವಾಗಿದ್ದು, ತಕ್ಷಣ ಸಿಎಂ ಮಧ್ಯಪ್ರವೇಶ ಮಾಡಬೇಕು. ನಡುಬೀದಿ ಹತ್ಯೆಗಳನ್ನು ನಿಲ್ಲಿಸಬೇಕು . ತಪ್ಪಿತಸ್ಥರನ್ನು ಹೆಡೆ ಮುರಿಕಟ್ಟಿ ಜೈಲಿಗೆ ಹಾಕಬೇಕು ಎಂದು ಟಿಎ ಶರವಣ ಆಗ್ರಹಿಸಿದ್ದಾರೆ.