ಮಂಗಳೂರು : ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿನ ಕಾರನ್ನು ಅಪಘಾತಗೊಳಿಸಿ, ಬಳಿಕ ತಲವಾರ್ಗಳಿಂದ ಕೊಚ್ಚಿ ಹಲ್ಲೆ ಮಾಡಲಾಗಿತ್ತು. ಈ ಹತ್ಯೆ ವಿಡಿಯೋ ಕೂಡ ಎಲ್ಲೆಡೆ ಹರಿದಾಡಿತ್ತು. ಇದೇ ವಿಡಿಯೋ ಆಧರಿಸಿ ಆರೋಪಿಗಳ ಬೆನ್ನತ್ತ ಪೊಲೀಸರು, ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಎಂಟು ಮಂದಿಯಲ್ಲಿ ಇಬ್ಬರು ಹಿಂದೂಗಳಿದ್ದು, ರಂಜಿತ್, ನಾಗರಾಜು ಮತ್ತು ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮಿಲ್, ಕಲಂದರ್ ಶಾಫಿ, ಮೊಹಮ್ಮದ್ ರಿಜ್ವಾನ್ ನ ಬಂಧಿತರಾಗಿದ್ದಾರೆ.
ಇನ್ನೂ ತನಿಖೆ ಆರಂಭಿಸಿದ ಪೊಲೀಸರಿಗೆ 2023ರಲ್ಲಿ ನಡೆದಿದ್ದ ಸಫ್ವಾನ್ ಹಾಗೂ ಸುಹಾಸ್ ಶೆಟ್ಟಿಯ ಆಪ್ತನ ನಡುವಿನ ಗಲಾಟೆಯ ಲಿಂಕ್ ಸಿಕ್ಕಿದೆ. ಸಫ್ವಾನ್ ಎಂಬಾತನ ಜತೆಗೆ ಸುಹಾಸ್ ಶೆಟ್ಟಿ ಆಪ್ತ ಪ್ರಶಾಂತ್ ಗಲಾಟೆ ಮಾಡಿಕೊಂಡಿದ್ದ. ಗಲಾಟೆ ವಿಚಾರಕ್ಕೆ ಮಾತುಕತೆ ನಡೆಸೋದಕ್ಕೆ ಸಫ್ವಾನ್ನನ್ನು ಕರೆದಿದ್ದ. 2023ರ ಸೆಪ್ಟೆಂಬರ್ನಲ್ಲಿ ಮಾತಾನಾಡುವುದಕ್ಕೆ ಎಂದು ಕರೆದ ಪ್ರಶಾಂತ್ ಹಾಗೂ ಗ್ಯಾಂಗ್ ಸಫ್ವಾನ್ಗೆ ಡ್ರ್ಯಾಗನರ್ನಿಂದ ಇರಿದಿತ್ತು. ಬಳಿಕ ಚೂರಿ ಇರಿತಕ್ಕೆ ಒಳಗಾದ ಸಫ್ವಾನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಚೂರಿ ಇರಿತ ಪ್ರಕರಣ ಬಳಿಕ ಸಫ್ವಾನ್ ಹಾಗೂ ಪ್ರಶಾಂತ್ ನಡುವಿನ ದ್ವೇಷಕ್ಕೆ ಕಾರಣವಾಗಿತ್ತು. ಹಲವು ಬಾರಿ ಪ್ರಶಾಂತ್ ಮೇಲೆ ದಾಳಿ ನಡೆಸಿದ್ದ ವೇಳೆ ಸುಹಾಶ್ ಶೆಟ್ಟಿ ತಡೆದಿದ್ದ. ಹೀಗಾಗಿಯೇ ಪ್ರಶಾಂತ್ನನ್ನು ಬಿಟ್ಟ ಸಫ್ವಾನ್, ಸುಹಾಸ್ ಹತ್ಯೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.
ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಫ್ವಾನ್, ಮಂಗಳೂರಿನ ಬಳಿಯ ಶಾಂತಿಗುಡ್ಡೆ ಪೇಜಾವರ ಗ್ರಾಮದವನು. ಅಬ್ದುಲ್ ನಾಸಿರ್ ಎಂಬುವವರ ಮಗನಾದ ಈತ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಮೇಸ್ತ್ರಿ ಕೆಲಸ ಮಾಡುತ್ತಿರುವ ನಿಯಾಜ್ ಕೂಡ ಕೊಲೆಯಲ್ಲಿ ಶಾಮೀಲಾಗಿದ್ದಾನೆ. ಈತ ಮಂಗಳೂರಿನ ಬಜ್ಪೆ ಶಾಂತಿಗುಡ್ಡೆ ಮಸೀದಿ ಬಳಿ ವಾಸ್ತವ್ಯವಿದ್ದಾನೆ. ಮಂಗಳೂರಿನ ಮೊಹಮ್ಮದ್ ಮುಝಮಿಲ್ 4 ತಿಂಗಳ ಹಿಂದೆ ಸೌದಿ ಅರೇಬಿಯಾದಿಂದ ಬಂದಿದ್ದ. ನವ ವಿವಾಹಿತನಾಗಿದ್ದು, ಈತನ ವಿರುದ್ಧ ಪಣಂಬೂರು ಠಾಣೆಯಲ್ಲಿ ಒಂದು ಪ್ರಕರಣ ಕೂಡ ಇದೆ. ಮಂಗಳೂರಿನ ಕುರ್ಸು ಗುಡ್ಡೆ ಕಳವಾರಿನ ಕಲಂದರ್ ಶಾಫಿ ಬೆಂಗಳೂರಿನಲ್ಲಿ ಸೇಲಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಸದ್ಯ ಸುಹಾಸ್ ಹತ್ಯೆಗೆ ನಿಜ ಕಾರಣ ಏನು ಅನ್ನೋದು ಖಾಕಿ ತನಿಖೆಯಲ್ಲಿ ಹೊರಬಿದ್ದಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಮತ್ತಷ್ಟು ವಿಚಾರಗಳನ್ನು ಬಯಲಿಗೆಳೆಯಲು ತನಿಖೆ ಮುಂದುವರಿಸಿದ್ದಾರೆ