ಬೆಂಗಳೂರು:- ಹಿಟ್ ಆಂಡ್ ರನ್ ಗೆ ಬೈಕ್ ಹಿಂಬದಿ ಸವಾರ ಬಲಿಯಾಗಿರುವ ಘಟನೆ ದೇವನಹಳ್ಳಿಯ ಪೂಜೇನಹಳ್ಳಿ ಗೇಟ್ ಬಳಿ ಜರುಗಿದೆ. ಕೆಜಿಎಫ್ ಮೂಲದ ಡಿ. ವೇಲು ಮೃತಪಟ್ಟಿರುವ ಹಿಂಬದಿ ಸವಾರ.
ಜಮ್ಮು ಮೇಲೆ ದಾಳಿಗೆ ಯತ್ನ: ಪಾಕ್‌ನ 50ಕ್ಕೂ ಹೆಚ್ಚು ಡ್ರೋನ್‌ಗಳು ಧ್ವಂಸ!
ಇಬ್ಬರು ಸವಾರರು, ಕೆಲಸ ಮುಗಿಸಿ ಬೈಕ್ ನಲ್ಲಿ ಹೋಗುತ್ತಿದ್ದರು. ಅನಂತ್ ಬೈಕ್ ಓಡಿಸ್ತಿದ್ರೆ ವೇಲು ಹಿಂಭಾಗದಲ್ಲಿ ಕೂತಿದ್ದರು. ಈ ವೇಳೆ ವೇಗವಾಗಿ ಬಂದು ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಅಪರಿಚಿತ ಕಾರು ಡಿಕ್ಕಿ ರಭಸಕ್ಕೆ ಹಿಂಬದಿ ಸವಾರ ವೇಲು ಸಾವನ್ನಪ್ಪಿದ್ದಾರೆ. ದೇವನಹಳ್ಳಿಯಲ್ಲಿ ಇಬ್ಬರು ವ್ಯಕ್ತಿಗಳು ಕೆಲಸ ಮಾಡುತ್ತಿದ್ದರು. ಅಪಘಾತ ಎಸಗಿ ಕಾರಿನ ಸಮೇತ ಚಾಲಕ ಪರಾರಿ ಆಗಿದ್ದು, ಕಳೆದ ರಾತ್ರಿ 7:10 ರ ಸುಮಾರಿಗೆ ಘಟನೆ ಜರುಗಿದೆ.
ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.