ಚಿಕ್ಕಮಗಳೂರು: ಲೈನ್‌ಮ್ಯಾನ್ ಬೈಕಿಗೆ ಕಾರೊಂದು ಡಿಕ್ಕಿ ಹೊಡೆದಿದ್ದು, ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದಾನೆ. ಬಾಳೆಹೊನ್ನೂರು – ಚಿಕ್ಕಮಗಳೂರು ಮಾರ್ಗದ ಜೇನುಬೈಲು ಬಳಿ ಹಿಟ್ ಅಂಡ್ ರನ್ ಕೇಸ್ ನಡೆದಿದೆ.
ರಸ್ತೆ ತಿರುವಿನಲ್ಲಿ ಚಲಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾಗಿದೆ. ಅಪಘಾತ ರಭಸಕ್ಕೆ ಲೈನ್‍ಮ್ಯಾನ್ ಅವಿನಾಶ್ ಬೈಕಿನಿಂದ ಹಾರಿ ಬಿದ್ದಿದ್ದು, ತೀವ್ರ ಗಾಯಗಳಾಗಿವೆ. ಸದ್ಯ ಅವಿನಾಶ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಐಪಿಎಲ್ ಬೆಟ್ಟಿಂಗ್ ಕುಳಗಳಿಗೆ ಖಾಕಿ ಶಾಕ್ ; ಬೆಟ್ಟಿಂಗ್ ದಂಧೆಕೋರರ ಬಂಧನ
ವಿದ್ಯುತ್ ಲೈನ್ ದುರಸ್ಥಿಗೆಂದು ಅವಿನಾಶ್ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಇನ್ನೂ ಈ ಅಪಘಾತದ ದೃಶ್ಯವನ್ನು ಹಿಂದಿನ ಬೈಕ್ ಸವಾರ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ. ಸದ್ಯ ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.