ಉಗ್ರರಿಗೆ ಸೆಂಟಿಮೆಂಟ್ ತೋರಿಸಲು ಹೋಗ್ಬಾರ್ದು ಎಂದು ಉಗ್ರರ ದಾಳಿಯನ್ನು ನಟ ಪ್ರೇಮ್ ಖಂಡಿಸಿದ್ದಾರೆ.
ಸ್ಕೂಟರ್ ಡಿಕ್ಕಿಯಿಂದ 13 ಲಕ್ಷ ಎಗರಿಸಿದ ಖದೀಮರು: ಬ್ಯಾಂಕ್ ಮುಂದೆಯೇ ಕೃತ್ಯ!
ಉಗ್ರರ ದಾಳಿಯ ಕುರಿತು ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಉಗ್ರರು ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವ್ ಯುದ್ಧ ಮಾಡ್ಲೇಬೇಕು ಎಂದು ನಿರ್ದೇಶಕ ಪ್ರೇಮ್ ಪೆಹಲ್ಗಾಮ್ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಉಗ್ರರಿಗೆ ಸೆಂಟಿಮೆಂಟ್ ತೊರಿಸಲು ಹೋಗಲೇಬಾರದು. ಏನಿದ್ರೂ ಹೊಡಿ, ಕಡಿ ಅಷ್ಟೇ. ಅಮಾಯಕ ಜೀವಗಳನ್ನ ತೆಗೆದಿದ್ದಾರೆ ಅಂದ್ರೆ ಅವರನ್ನೆಲ್ಲ ಕತ್ತರಿಸಿ, ಪೀಸ್ ಮಾಡಿ ಎಸೆಯಬೇಕು ಎಂದು ಆಕ್ರೋಶ ಹೊರಹಾಕಿದರು.
ಅವರದ್ದು ಹೇಡಿತನ, ಅವರ ಮೇಲೆ ಎಮೋಷನ್ಸ್ ಬೇಡ. ಕೆಲವರು ಯುದ್ಧ ಬೇಡ ಅಂತಾ ಹೇಳ್ತಾರಲ್ಲ. ಆದರೆ ಸ್ವಾಮಿ ಯುದ್ಧ ಮಾಡ್ಬೇಕು. ನಾವು ಬದುಕಬೇಕು ಅಂದ್ರೆ ಯುದ್ಧ ಮಾಡಲೇಬೇಕು. ನಮ್ಮ ಜನಗಳನ್ನ ಸಾಯಿಸ್ತಾರೆ ಅಂದ್ರೆ ನಾವು ಯುದ್ಧ ಮಾಡಬೇಕು. ಇದು ಉಗ್ರರ ಹೀನಕೃತ್ಯ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿಯವ್ರು ಇದ್ದಾರೆ. 100% ಅವರು ಇದನ್ನು ಹ್ಯಾಂಡಲ್ ಮಾಡ್ತಾರೆ. ನಮ್ಮವರು ಏನೂ ಕಮ್ಮಿ ಇಲ್ಲ. ಆ ಉಗ್ರರನ್ನು ಸುಮ್ನೆ ಬಿಡಲ್ಲ, ಹೊಡಿತಾರೆ. ಹೊಡಿಲಿ ಅಂತಾನೇ ನಾನು ಕಾಯ್ತಿದ್ದೀನಿ ಎಂದು ಹೇಳಿದರು