ಬೆಂಗಳೂರು:- ಕರ್ನಾಟಕದಲ್ಲಿ ಹನಿಟ್ರ್ಯಾಪ್ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದ್ದು, ಶೀಘ್ರವೇ ಸಿಡಿ ಫ್ಯಾಕ್ಟರಿ ಓನರ್ ಹೆಸರು ಬಹಿರಂಗವಾಗಲಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಈಗಾಗಲೇ ಇದರ ಬಗ್ಗೆ ಸದನದೊಳಗೆ ಮಾತನಾಡಿದ್ದಾರೆ. ಎಸ್ಟಿ ಸಮುದಾಯಕ್ಕೆ ಸೇರಿರುವಂತಹ ಕಾಂಗ್ರೆಸ್ನ ಒಬ್ಬ ಮಂತ್ರಿ ರಾಜಣ್ಣ ಅವರು ಅಷ್ಟೇ ಅಲ್ಲ. ಜಾರಕಿಹೊಳಿ ಅವರು ಕೂಡ ಈ ವಿಚಾರದಲ್ಲಿ ಸಾಕಷ್ಟು ನೊಂದಿದ್ದಾರೆ. ರಾಜಕೀಯವಾಗಿ, ಸೈದ್ಧಾಂತಿಕವಾಗಿ ಚರ್ಚೆ, ಹೋರಾಟ, ವಿಚಾರ ಮಾಡುವಂತದ್ದು ಸರ್ವೇ ಸಾಮಾನ್ಯ. ಆದರೆ ಈ ರೀತಿ ಒಬ್ಬರನ್ನು ವ್ಯಕ್ತಿಗತವಾಗಿ ನಿಂದಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹನಿಟ್ರ್ಯಾಪ್ ಇದು ನಿಜಕ್ಕೂ ಕೂಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಗೃಹ ಸಚಿವರ ಜೊತೆ ಮಾತನಾಡಿ ತನಿಖೆಗೆ ಒಪ್ಪಿಸಬೇಕಾಗುತ್ತದೆ. ಎಲ್ಲಾ ರೀತಿ ತನಿಖೆ ನಡೆಯಲಿ. 48 ಜನರಿದ್ದಾರೆ, 50 ಜನರಿದ್ದಾರೆ ಎಂದು ಹೇಳುತ್ತಿದ್ದಾರೆ. ಅದು ಕೂಡ ಬಹಿರಂಗ ಆಗಲಿ. ರಾಜ್ಯದ ಜನತೆ ಮುಂದೆ ಯಾರು ಆ ಮಹಾನುಭವ ಸಿಡಿ ಫ್ಯಾಕ್ಟರಿ ಓನರ್ ಎಂದು ಗೊತ್ತಾಗಲಿ ಎಂದು ಆಗ್ರಹಿಸಿದರು.