ಮೈಸೂರು: ರಾಜ್ಯ ರಾಜಕಾರಣದ ಹನಿ ಪುರಾಣ ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. ಕಳೆದ ಮಾರ್ಚ್ 20ರಂದು ವಿಧಾನಸಭೆ ಕಲಾಪದಲ್ಲಿ ಹನಿಟ್ರ್ಯಾಪ್ ಪ್ರಸ್ತಾಪ ರಾಜಕೀಯದ ಅಸಹ್ಯ ತಂತ್ರಗಾರಿಕೆಯನ್ನು ಬೆತ್ತಲಾಗಿಸಿತ್ತು. ಸಹಕಾರ ಸಚಿವರ ಹೇಳಿಕೆ ಇಡೀ ಕಾಂಗ್ರೆಸ್ ಪಾಳಯ ಕಂಪಿಸುವಂತೆ ಮಾಡಿದೆ. ಇನ್ನೂ ಈ ವಿಚಾರವಾಗಿ ಮೈಸೂರಿನಲ್ಲಿ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಬಿಜೆಪಿಯಲ್ಲೇ ಹನಿಟ್ರ‍್ಯಾಪ್ ಗಳು ನಡೆದಿವೆ. ಹೀಗಾಗಿಯೇ ಬಿಜೆಪಿ ಶಾಸಕರು, ಮಾಜಿ ಸಿಎಂ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಿರುವಾಗ ಬಿಜೆಪಿಯವರಿಗೆ ನಮ್ಮ ನಾಯಕರ ಬಗ್ಗೆ ಮಾತನಾಡಲು ಏನು ಹಕ್ಕಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಸಚಿವರ ಮನೆಗೆ ಸಿಸಿಟಿವಿ ಹಾಕದ ವಿಚಾರಕ್ಕೆ ಪ್ರತಿಕ್ರಿಯಿಸಿ,
ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆಯಂತೆ..!
ಕೆಲವರು ಹನಿಟ್ರ‍್ಯಾಪ್ ಮಾಡಲೆಂದೇ ಸಚಿವರ ಮನೆಗೆ ಬರುತ್ತಾರೆ. ಈಗಾಗಿ ಸಿಸಿಟಿವಿ ಹಾಕಿಸಬೇಕು. ಸಚಿವರ ಮನೆಗಳಿಗೆ ಸಿಸಿಟಿವಿ ಇಲ್ಲದ ವಿಚಾರ ನನಗೆ ಗೊತ್ತಿಲ್ಲ. ಆದ್ರೆ ಸಿಎಂ ಮನೆಗೆ ಸಿಸಿಟಿವಿ ಇದೆ. ನಾನು ಅಲ್ಲೇ ಇರುವುದರಿಂದ ಸಿಸಿಟಿವಿ ಇರುವ ಬಗ್ಗೆ ನನಗೆ ಗೊತ್ತಿದೆ, ಬೇರೆಯವರ ಮನೆಯ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಸಿಎಂ ಮನೆಗೆ ಪೊಲೀಸ್ ಬಂದೂಬಸ್ತ್ ಸಹ ಇದೆ, ಯಾರೇ ಬಂದರೂ ರೆಕಾರ್ಡ್ ಆಗುತ್ತೆ. ಸಚಿವರ ಮನೆಗೆ ಖಂಡಿತವಾಗಿ ಸಿಸಿಟಿವಿ ಹಾಕಬೇಕು. ಸಿಸಿಟಿವಿ ಇದ್ದರೇ ಹನಿ ಟ್ರ‍್ಯಾಪ್ ಮಾಡುವವರ ಮೇಲೆ ಕಣ್ಣಿಡಬಹುದು ಎಂದಿದ್ದಾರೆ. ಇನ್ನೂ ಸದನದಲ್ಲಿ ಕಾಂಗ್ರೆಸ್ ನಾಯಕರು ಯತ್ನಾಳಗೆ ಚೀಟಿ ಕೊಟ್ಟ ವಿಚಾರ ಕುರಿತು ಮಾತನಾಡಿ, ಚೀಟಿ ಕೊಟ್ಟಿದ್ದು ಯಾರು ಎಂಬುದು ಗೊತ್ತಿಲ್ಲ. ನಮ್ಮ ನಾಯಕರು ಸದನದಲ್ಲಿ ಮಾತನಾಡಿರೋದು ಮಾತ್ರ ಗೊತ್ತಿದೆ. ಅದರ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.