ರಾಯಚೂರು:- ಕರ್ನಾಟಕದಲ್ಲಿ ಮರ್ಯಾದಾ ಹತ್ಯೆ ಒಂದು ನಡೆದಿದ್ದು, ಪ್ರೀತಿಸಿದ ಮಗಳ ಸಾಯಿಸಿ ಪಾಪಿ ತಂದೆ ಓರ್ವ ನದಿಗೆ ಎಸೆದಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಜರುಗಿದೆ
ಸರಣಿ ಅಪಘಾತ: ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ 4 ಕಾರುಗಳು ಜಖಂ!
ಅಪ್ರಾಪ್ತೆ ಅನ್ಯ ಜಾತಿಯ ಯುವಕ ಹನುಮಂತ ಎಂಬಾತನನ್ನ ಪ್ರೀತಿ ಮಾಡಿದ್ಲು. ಈ ಪ್ರೀತಿ ಆಕೆಯ ತಂದೆ ಲಕ್ಕಪ್ಪ ಕಂಬಳಿಗೆ ಕೋಪ ತರಿಸಿತ್ತು. ಅವನನ್ನೇ ಮದುವೆಯಾಗುವ ಪಣ ತೊಟ್ಟಿದ್ದ ಮಗಳ ಹಠದಿಂದ ಗ್ರಾಮದಲ್ಲಿ ತನ್ನ ಹಾಗೂ ಕುಟುಂಬ ಮರ್ಯಾದೆ ಮಣ್ಣು ಪಾಲಾಗುತ್ತೆ ಎಂದು ಲಕ್ಕಪ್ಪ ಆತಂಕದಲ್ಲಿದ್ದ. ಇದೇ ಸಿಟ್ಟಿನಲ್ಲಿ ಆತ ಮಾಡಿದ್ದು ಮಾತ್ರ ಘೋರ ಕೃತ್ಯ ನಡೆದಿದೆ.
ಅಪ್ರಾಪ್ತೆ ಹಾಗೂ ಹನುಮಂತ ಒಂದೇ ಗ್ರಾಮದವರಾದ್ರಿಂದ ಇವರಿಬ್ಬರ ಪ್ರೀತಿ ಗುಟ್ಟಾಗಿರದೆ ಗ್ರಾಮದಲ್ಲಿ ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಎಲ್ಲೆಂದರಲ್ಲಿ ಒಟ್ಟಿಗೆ ಓಡಾಡುತ್ತಿದ್ದರು. ಇವರಿಬ್ಬರ ಪ್ರೀತಿಗೆ ಮನೆಯಲ್ಲಿ ಅಪಸ್ವರ ಕೇಳಿ ಬಂದಿತ್ತು. ಅಲ್ಲದೇ ಪ್ರೀತಿಸಿದ ಯುವಕನೊಂದಿಗೆ ಬಾಲಕಿ ಮನೆ ಬಿಟ್ಟು ಹೋಗಿದ್ಲು. ಆಗ ತಂದೆ ಲಕ್ಕಪ್ಪ ಆಕೆಯನ್ನ ಹುಡುಕಿಸಿ ಕರೆತಂದಿದ್ದ. ಅದಾದ ನಂತರವೂ ಇಬ್ಬರು ಸಲುಗೆಯಿಂದ ಇದ್ದದ್ದು ತಂದೆಗೆ ಮತ್ತಷ್ಟು ಸಿಟ್ಟು ತರಿಸಿತ್ತು. ನಮ್ಮ ಮರ್ಯಾದೆ ಕಳೀಬೇಡ ಅವನೊಂದಿಗೆ ಮಾತನಾಡುವುದನ್ನು ಬಿಡು ಎಂದು ಮಗಳಿಗೆ ತಂದೆ ತಾಕೀತು ಮಾಡಿದ್ದ. ಆದ್ರೆ 18 ವರ್ಷ ತುಂಬಿದ ಮರು ದಿನವೇ ಹನುಂತನ ಜೊತೆ ಓಡಿ ಹೋಗುವುದಾಗಿ ಮಗಳು ಪದೇ ಪದೇ ಹೇಳುತ್ತಿದ್ದಳು
ಇದ್ರಿಂದ ಸಿಟ್ಟಿಗೆದ್ದಿದ್ದ ಲಕ್ಕಪ್ಪನ ಮಗಳು ನನ್ನ ಮರ್ಯಾದೆ ಕಳೆಯುತ್ತಿದ್ದಾಳೆ ಎಂದು ಆಕೆಯನ್ನೇ ಹತ್ಯೆಗೈದಿದ್ದಾನೆ. ಬಳಿ ಕೃಷ್ಣಾ ನದಿಗೆ ಮಗಳ ಮೃತದೇಹವನ್ನ ಎಸೆದಿದ್ದಾನೆ. ಅಲ್ಲದೇ ನದಿಗೆ ಎಸೆದು ಬಂದು ಪತ್ನಿ ಮುಂದೆ ನಡೆದ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾರೆ.