ಹುಬ್ಬಳ್ಳಿ: ವೇಗವಾಗಿ ಬಂದ ಲಾರಿ ಚಾಲಕ ನಿಯಂತ್ರಣ ತಪ್ಪಿ ಮುಂದೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಪರಿಣಾಮ, ಚಾಲಕನ ಎರಡು ಕಾಲು ಕಟ್ ಆದ ಘಟನೆ ಹುಬ್ಬಳ್ಳಿ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಹೊನ್ನಾಪುರ ಬಳಿ ನಡೆದಿದೆ.
ಬೆಂಗಳೂರಿಂದ ಹುಬ್ಬಳ್ಳಿಯತ್ತ ಬರುತ್ತಿದ್ದ ಲಾರಿ ಚಾಲಕ ವೇಗವಾಗಿ ಬಂದಿದ್ದಾನೆ. ಆತನಿಗೆ ನಿಯಂತ್ರಣ ತಪ್ಪಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಗುದ್ದಿದ್ದಾನೆ. ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಆತನ ಎರಡು ಕಾಲ ಕಟ್ ಆಗಿದೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.