ಹುಬ್ಬಳ್ಳಿ : ಸಾಂಬಾರು ಮೈಮೆಲೆ ಬಿದ್ದು ಎರಡೂವರೆ ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಶಿಗ್ಗಾಂವ ತಾಲೂಕಿನ ಕುನ್ನೂರು ಗ್ರಾಮದಲ್ಲಿ ನಡೆದಿದೆ. ಮದುವೆ ಮನೆಯಲ್ಲಿ ಮಾಡಿದ್ದ ಸಾಂಬಾರು ಮೈಮೇಲೆ ಬಿದ್ದಿದ್ದರಿಂದ ಸಾವನ್ನಪ್ಪಿದ್ದು, ಹುಬ್ಬಳ್ಳಿ ತಾಲೂಕಿನ ಚನ್ನಾಪುರ ಗ್ರಾಮದ ರುಕ್ಸಾನಾ ಬಾನು ಶೇಖ್ ಸನದಿ ಮೃತ ಬಾಲಕಿಯಾಗಿದ್ದಾಳೆ.
ಐದು ದಿನದ ಹಿಂದೆ ಪೋಷಕರ ಜತೆ ಸಂಬಂಧಿಕರ ವಿವಾಹಕ್ಕೆ ಹೋಗಿದ್ದಳು. ಮದುವೆ ಮನೆಯಲ್ಲಿ ಸುಡುವ ಸಾಂಬಾರು ಬಾಲಕಿ ಮೈಮೆಲೆ ಬಿದ್ದಿದೆ. ಕೂಡಲೇ ಬಾಲಕಿಯನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಲಾಗಿತ್ತು. ಚಿಕತ್ಸೆ ನೀಡಿ ಎರಡು ದಿನದ ಹಿಂದಷ್ಟೇ ಬಾಲಕಿ ಯನ್ನು ಡಿಸ್ಚಾರ್ಜ್ ಮಾಡಲಾಗಿತ್ತು.
ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆ ಇದ್ಯಾ!? ಹಾಗಿದ್ರೆ ಈ ಆಹಾರಗಳನ್ನು ತಪ್ಪದೇ ಸೇವಿಸಿ!
ಇಂದು ಮತ್ತೆ ಮೈಮೆಲೆ ಗುಳ್ಳೆಗಳು ಎದ್ದಿದ್ದವು. ಹೀಗಾಗಿ ಮತ್ತೆ ಕಿಮ್ಸ್ ಗೆ ಬಾಲಕಿ ಕರೆದುಕೊಂಡು ಬರಲಾಗುತ್ತಿತ್ತು. ಆದ್ರೆ ಕಿಮ್ಸ್ ಗೆ ಬರುವ ಮುನ್ನವೇ ಬಾಲಕಿ ಮೃತಪಟ್ಟಿದ್ದಾಳೆ. ಇನ್ನೂ ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರಿಡುತ್ತಿದ್ದಾರೆ.