ಹುಬ್ಬಳ್ಳಿ: ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಆಪೂಸ್ (ಅಲ್ಪಾನು) ಮಾವು ತಳಿ ಸಾಕಷ್ಟು ಹೂವು ಹಾಗೂ ಕಾಯಿ ಬಿಡತಾ ಇದ್ದು ಈ ವರ್ಷ ಮಾವು ಬೆಳೆಗೆ ಅನುಕೂಲಕರ ವಾತಾವರಣವಿದೆ. ಇಬ್ಬನಿ ಬೀಳದ ಕಾರಣಕ್ಕೆ ಬಂಪರ್ ಫಸಲು ರೈತರ ಕೈಗೆಟುಕಲಿದೆ ಎನ್ನಲಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಮತ್ತು ಧಾರವಾಡ ತಾಲೂಕುಗಳಲ್ಲಿ ಹಾಗೂ ಗದಗ, ಹಾವೇರಿ ಉತ್ತರ ಕನ್ನಡ ಮಾವು ಹೆಚ್ಚಾಗಿ ಬೆಳೆಯಲಾಗಿದೆ. ಉಳಿದಂತೆ ಕುಂದಗೋಳ ಮತ್ತು ಹುಬ್ಬಳ್ಳಿ ತಾಲೂಕುಗಳಲ್ಲೂ ಅಷ್ಟಿಷ್ಟು ಮಾವು ಬೆಳೆ ಕಾಣಬಹುದು. ಜಿಲ್ಲೆಯ ಬಹುತೇಕ ರೈತರು ಆಪೂಸ್ ತಳಿಯನ್ನೇ ಅವಲಂಬಿಸಿದ್ದಾರೆ. ಈ ಭಾಗದ ಮಣ್ಣು ಮತ್ತು ಹವಾಮಾನ ಗುಣಗಳಿಗೆ ಆಪೂಸ್ ತಳಿಯೇ ಸೂಕ್ತವಾಗಿದೆ.
Monkey Fever: ಹೆಚ್ಚಾಗುತ್ತಿರುವ ಮಂಗನ ಕಾಯಿಲೆ ಆತಂಕ! ಈ ಸೋಂಕಿನ ಲಕ್ಷಣಗಳೇನು..? ಇದರಿಂದ ಪಾರಾಗುವುದು ಹೇಗೆ..?
ಅದರಲ್ಲೂ ಧಾರವಾಡಜಿಲ್ಲೆಯಲ್ಲಿ ಅಂದಾಜು 8,400 ,ಗದಗ ಜಿಲ್ಲೆಯಲ್ಲಿ 3840ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗಿದೆ ಕೆಲ ವರ್ಷಗಳಿಂದ ಮಾವು ಬೆಳೆಗಾರರಿಗೆ ಆಕಾಲಿಕ ಗಾಳಿ-ಮಳೆ, ಇಬ್ಬನಿ ಕಾಡಿತ್ತು. ಮರಗಳು ಹೂವು ಬಿಟ್ಟ ಸಂದರ್ಭದಲ್ಲಿ ಸುರಿದ ಮಳೆ ಅರ್ಧದಷ್ಟು ಫಸಲನ್ನು ಹಾಳು ಮಾಡಿತ್ತು. ಆದರೆ, ಈ ಬಾರಿ ಅಕಾಲಿಕ ಮಳೆಯಾಗಿಲ್ಲ. ಹೀಗಾಗಿ ಶೇ. 95ರಷ್ಟು ಮಾವಿನ ಮರಗಳು ಹೂವು ಬಿಟ್ಟಿವೆ. ಕಳೆದ 4-5 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಾವಿನ ಮರಗಳು ಉತ್ತಮವಾಗಿ ಹೂವು ಬಿಟ್ಟಿವೆ.
ಕೆಲ ದಿನಗಳ ಹಿಂದೆ ಬೆಳಗಿನ ಜಾವ ಇಬ್ಬನಿ ಬಿದ್ದಿರುವುದು ರೈತರನ್ನು ಚಿಂತೆಗೀಡು ಮಾಡಿತ್ತು. ಆದರೆ, ಇಬ್ಬನಿ ಕಾಟ ಮುಂದುವರಿದಿಲ್ಲ. ನೀರು ಬಸಿಯುವಷ್ಟು ಇಬ್ಬನಿ ಬೀಳಬಾರದು. ಜತೆಗೆ ಹಗಲು ಉಷ್ಣತೆಯ ಪ್ರಮಾಣ ಹೆಚ್ಚಾಗಬಾರದು. ಇಂಥ ಹದಭರಿತ ವಾತಾವರಣವಿದ್ದರೆ ಹೆಕ್ಟೇರ್ ಅಂದಾಜು 10-12 ತಳಿ ಫಸಲು ಬೆಳೆಯಲಾಗಿದೆ. ಆದರೆ
ಸರಿಯಾಗಿ ನಿರ್ವಹಣೆ ಮಾಡದಿರುವ ಪರಿಣಾಮ ಧಾರವಾಡ ಜಿಲ್ಲೆಯಲ್ಲಿ ಹೆಕ್ಟರ್ಗೆ ಅಂದಾಜು 4-5 ಟನ್ ಫಸಲು ಕೈಗೆಟುಕುತ್ತಿದೆ.
ತೋಟಗಾರಿಕೆ ತಜ್ಞರು, ಜೂನ್ ಆರಂಭಕ್ಕೂ ಮೊದಲು ಒಣಗಿದ ಮತ್ತು ದೊಡ್ಡ ರೆಂಬೆಗಳನ್ನು ಕತ್ತರಿಸಬೇಕು. ಇದರಿಂದ ಮರೆಗಳಿಗೆ ಬಿಸಿಲು ತಾಗುತ್ತದೆ. ಮಳೆಗಾಲದಲ್ಲಿ ಕಸ ಬೆಳೆಯದಂತೆ ನೋಡಿಕೊಳ್ಳಬೇಕು. ಮರಗಳ ಸುತ್ತ ಸ್ವಚ್ಛವಾಗಿಟ್ಟು ನೀರು ಇಂಗುವಂತೆ ವೃತ್ತಾಕಾರದೆ ಚಳಿ ಆರಂಭವಾಗುತ್ತಿದ್ದಂತೆ ಗೊಬ್ಬರ ಹರಡುವುದು ನಿರ್ವಹಣೆ ಖರ್ಚು ವೆಚ್ಚವೇ ಜಾಸ್ತಿ ಹವಾಮಾನದ ವೈಫರಿತ್ಯಕ್ಕೀಡಾದರೆ ದೊಡ್ಡ ಸಂಕಷ್ಟ ಹೀಗಾಗಿ, ಬಹುತೇಕ ರೈತರು ಮಾವಿನ ತೋಟಗಳನ್ನು ಸ್ವತಃ ನಿರ್ವಹಣೆ ಮಾಡದೇ 2-3 ವರ್ಷಗಳ ಒಪ್ಪಂದದಂತೆ ವ್ಯಾಪಾರಸ್ಪರಿಗೆ ಗುತ್ತಿಗೆ ನೀಡಿರುತ್ತಾರೆ. ಇದರಿಂದ ನಿರ್ವಹಣೆ ಇಲ್ಲದೆ ಮಾವಿನ ಫಸಲು ನಿರೀಕ್ಷಿತ ಪ್ರಮಾಣದಲ್ಲಿ ಕೈಗೆಟುಕುತ್ತಿಲ್ಲ ಎಂಬ ಆತಂಕ ಸಹ ವ್ಯಕ್ತಪಡಿಸಿದರು.