ಹುಬ್ಬಳ್ಳಿ : ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಬಾಲಕಿ ಸಂಬಂಧಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದಂತೆ ಸರಕಾರ ಪರವಾಗಿ 10 ಲಕ್ಷ ಪರಿಹಾರ ನೀಡಲಾಗಿದೆ ಎಂದು ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ನಗರದಲ್ಲಿಂದು ಬಾಲಕಿ ಕುಟುಂಬಸ್ಥರಿಗೆ ಪರಿಹಾರದ ಚಕ್ ನೀಡಿದ ನಂತರ ಮಾಧ್ಯಮಗಳ ಪ್ರತಿನಿಧಿಗಳ ಜೊತೆಗೆ ಅವರು ಮಾತನಾಡಿದರು,
ಇಂತಹ ಘಟನೆ ಆಗಬಾರದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಬಂಧಿಸಿದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.ಮಕ್ಕಳ ಶಿಕ್ಷಣಕ್ಕೆ ಜಿಲ್ಲಾಧಿಕಾರಿ ಅವರು ಜಿಲ್ಲಾಡಳಿತದಿಂದ ಸಹಾಯ ಮಾಡೋದಾಗಿ ತಿಳಿಸಿದ್ದಾರೆ.ಸಾಮಾನ್ಯವಾಗಿ 5 ಲಕ್ಷ ಪರಿಹಾರ ನೀಡಲಾಗುತ್ತೆ ಆದರೆ ಇದನ್ನ ವಿಶೇಷ ಪ್ರಕರಣ ಎಂದು ಪರಿಗಣಿಸಿ 10 ಲಕ್ಷ ನೀಡಲಾಗಿದೆ ಎಂದರು .
ನೀವು Non Veg ತಿನ್ನೊಲ್ವಾ ಹಾಗಿದ್ರೆ ವರ್ಷಕ್ಕೊಮ್ಮೆ ಈ ಹಣ್ಣು ತಿನ್ನಿ ಸಾಕು ನಿಮಗೆ ಕ್ಯಾನ್ಸರ್ ಬರೊಲ್ಲ!
ಇನ್ನು ಹುಬ್ಬಳ್ಳಿ ಸಿಲಿಂಡರ್ ಸೋರಿಕೆ ಪ್ರಕರಣದಲ್ಲಿ 8 ಜನರಿಗೆ 40 ಲಕ್ಷ ಪರಿಹಾರ ನೀಡಲಾಗಿದೆ ತಾವು ಸಹ ಪರಿಶೀಲನೆ ಮಾಡಬಹುದು ಎಂದರು. ಜಿಲ್ಲಾಧಿಕಾರಿ ದಿವ್ಯ ಪ್ರಭು, ತಹಶಿಲ್ದಾರರ ಕಲಗೌಡರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಎಸ್, ಡಿ. ಮಕಾನಾಂದರ,
ಕಾಂಗ್ರೆಸ್ ಸಮಿತಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನೀಲ ಕುಮಾರ್ ಪಾಟೀಲ್,ಕೆಪಿಸಿಸಿ ಸದಸ್ಯ ಚಂದ್ರಶೇಖರ ಜುಟ್ಟಲ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ.ಎಸ್.ಪಾಟೀಲ್, ಆಶ್ರಯ ಸಮಿತಿ ಸದಸ್ಯ ಜಗದೀಶ್ ನೆಲಗುಡ್ಡ, ಕಾಂಗ್ರೆಸ್ ಮುಖಂಡರಾದ ರವಿ ಕಲ್ಯಾಣಿ, ರಾಜೇಂದ್ರ ಪಾಟೀಲ್ ಮುಂತಾದವರು ಉಪಸ್ಥಿತಿರಿದ್ದರು.