- ಹುಬ್ಬಳ್ಳಿ: ಇಂದಿನ ದಿನಗಳಲ್ಲಿ ಪತ್ರಿಕೆಗಳು ಪ್ರಭಾವಶಾಲಿಯಾಗಿದ್ದು ಪತ್ರಕರ್ತರು ವೃತ್ತಿ ನಿಷ್ಠೆ ಬೆಳೆಸಿಕೊಳ್ಳಲು ಸಾಮಾಜಿಕ ಹೋರಾಟಗಾರರು ರಾಜು ಅನಂತ ಸಾ ನಾಯಕವಾಡಿ ಹೇಳಿದರು.
ದ್ವಿತೀಯ ಪಿಯುಸಿ -2 ಫಲಿತಾಂಶ ಪ್ರಕಟ: ಶೇ.31.27 ರಷ್ಟು ವಿದ್ಯಾರ್ಥಿಗಳು ಪಾಸ್!
ನಗರದಲ್ಲಿಂದು ಶ್ರೀ ಸಿದ್ಧಾರೂಢ ಮರದ ಆವರಣದಲ್ಲಿ ಸತ್ಯದರ್ಪಣ ಮತ್ತು ಕನ್ನಡ ಧ್ವಜ ಪತ್ರಿಕಾ ಕಾರ್ಯಾಲಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು, ಪತ್ರಿಕೆಗಳಿಗೆ ತನ್ನದೇ ಜವಾಬ್ದಾರಿ ಇರುತ್ತದೆ. ಕಾರ್ಯಾಯಾಂಗ ಶಾಸಕಾಂಗ ಹಾಗೂ ನ್ಯಾಯಾಂಗದಂತೆ ಪತ್ರಿಕಾರಂಗ ಸಹ ಇಂದು ಅಂಗ ಆಗಿದೆ. ಪ್ರತಿಯೊಬ್ಬರು ಪತ್ರಿಕೆ ರಂಗವನ್ನ ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಶ್ರೀ ಸಿದ್ಧಾರೂಢ ಮಠದ ಟ್ರಸ್ಟ್ ಸಮಿತಿ ಅಧ್ಯಕ್ಷ ಚನ್ನವೀರ ಮುಂಗರವಾಡಿ, ಕಾಂಗ್ರೆಸ್ ನಾಯಕ ಶರಣಪ್ಪ ಕೊಟಗಿ, ರಮೇಶ ಬೆಳಗಾವಿ, ಪತ್ರಿಕಾ ಸಂಪಾದಕರಾದ ಎಂ.ಎನ್.ಮೇಟಿಯವರ, ವಸಂತ ಹಬೀಬ್ ಮುಂತಾದವರು ಭಾಗವಹಿಸಿದ್ದರು.