ಹುಬ್ಬಳ್ಳಿ: ಸಂಸತ್ತು ರಚನೆ ಸಮಾರಂಭವು ಚಿನ್ಮಯ ವಿದ್ಯಾಲಯದಲ್ಲಿ ಭವ್ಯವಾದ ರೀತಿಯಲ್ಲಿ ಆಚರಿಸಲಾಯಿತು. ಹೊಸದಾಗಿ ಆಯ್ಕೆಯಾದ ಶಾಲಾ ಸಂಸತ್ತು ಸದಸ್ಯರಿಗೆ ಬ್ಯಾಡ್ಜ್‌ಗಳನ್ನು ಹಾಕಲಾಯಿತು. ವಿದ್ಯಾರ್ಥಿಗಳು ತುಂಬಾ ಚುರುಕು ಮತ್ತು ಉತ್ಸಾಹದಿಂದಿದ್ದರು.
ಪಿಲಿಕುಳ ಉದ್ಯಾನವನದಲ್ಲಿ ಆಘಾತಕಾರಿ ಘಟನೆ: ಒಂದು ವಾರದಲ್ಲಿ 9 ಪ್ರಾಣಿಗಳು ನಿಗೂಢ ಸಾವು!
ಇದು ರಾಜ್ಯ ಹಾಗೂ ಸಿಬಿಎಸ್ ಇ ವಿಭಾಗಗಳಿಗೆ ಸಾಮಾನ್ಯ ಸಮಾರಂಭವಾಗಿತ್ತು ಹೊಸದಾಗಿ ಆಯ್ಕೆಯಾದ ರಾಜ್ಯ ವಿಭಾಗದ ಕಮಾಂಡರ್‌ಗಳು ಸಾಕ್ಷಿ ಕುಲಕರ್ಣಿ, ಮತ್ತು ಸ್ವಯಂ ಹಿರೇಮಠ. ಹೊಸದಾಗಿ ಆಯ್ಕೆಯಾದ ಸಿ. ಬಿ. ಎಸ್. ಇ ವಿಭಾಗದ ಕಮಾಂಡರ್‌ಗಳು ಪ್ರಿಷಾ ರಾವ್, ಮತ್ತು ಶಿರೀಷ್ ಕುಲಕರ್ಣಿ.ಮುಖ್ಯ ಅತಿಥಿಯಾಗಿ ರೈಲ್ವೆ ರಕ್ಷಕ ಪಡೆ ಹುಬ್ಬಳ್ಳಿಯ ಉಪನಿರೀಕ್ಷಕ ಮಂಜುನಾಥ್ ಬಿ.ಕೆ. ಭಾಗವಹಿಸಿದ್ದರು. ಅವರು ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಮತ್ತು ಶಿಸ್ತು ಕುರಿತಾಗಿ ಮಾರ್ಗದರ್ಶನ ನೀಡಿದರು. ಜೊತೆಗೆ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆಯನ್ನು ತ್ಯಜಿಸಬೇಕು ಮತ್ತು ವಿದ್ಯಾಲಯದ ಮೌಲ್ಯಗಳಿಗೆ ಧ್ವಜಧಾರಕರಾಗಬೇಕು ಎಂದು ಸಲಹೆ ನೀಡಿದರು.
ಈ ಸಮಾರಂಭದಲ್ಲಿ ಚಿನ್ಮಯ ಸಂಸ್ಥೆಗಳ ಅಧ್ಯಕ್ಷರಾದ ಗಿರೀಶ್ ಉಪಾಧ್ಯಾಯ, ಕಾರ್ಯದರ್ಶಿ ಪಾಂಡುರಂಗ ನಾಯ್ಡು, ನಿರ್ವಾಹಕರು ವಿಶ್ವನಾಥ ರಾನಡೆ ಉಪಸ್ಥಿತರಿದ್ದರು. ಚಿನ್ಮಯ ವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರಾದ . ಭುವನೇಶ್ವರಿ ನವಡಾ ನೀತಾ ಹೆಗ್ಡೆ ಮತ್ತು . ಅಂಜಲಿ ಗುಡಿ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿದ್ಯಾಲಯದ ಶಿಕ್ಷಕರು, ಶಾಲಾ ಸಂಸತ್ ಸದಸ್ಯರು, ಪೋಷಕರು ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸಮಾರಂಭವನ್ನು ಧೃತಿ ದೇಸಾಯಿ ಅವರು ಸ್ವಾಗತಿಸಿದರು. ಶಾಲಾ ಸಂಸತ್ತು ಸದಸ್ಯರ ಗುಣಗಳನ್ನು ಪೃಥ್ವಿ ಪಟೇಲ್, ಸುಧಾ ರಾಜಪುರೋಹಿತ್ ಮತ್ತು ಶ್ರದ್ಧಾ ದೀಕ್ಷಿತ್ ಓದಿದರು. ಧೃತಿ ದೇಸಾಯಿ ಧನ್ಯವಾದ ಪ್ರಸ್ತಾವನೆ ಮಾಡಿದರು ಮತ್ತು ರವಿಕಿರಣ ಮತ್ತು ಅಂಕಿತಾ ಚೆಬ್ಬಿ ಅವರು ಕಪರಿಂಗ್ ನೇರವೇರಿಸಿದರು.