ಹುಬ್ಬಳ್ಳಿ: ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ರೋತ್ಸವದ ಅಂಗವಾಗಿ ನಗರದ ಮೂರುಸಾವಿರಹ ಮಠದಲ್ಲಿ ನಡೆಯುವ ಶ್ರೀ ಬಸವೇಶ್ವರ ಜಯಂತಿಯನ್ನ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಬೇಕು ಎಂದು ಜಗದ್ಗುರು ಡಾ.ಗುರುಸಿದ್ದ ರಾಜಯೋ ಗೀಂದ್ರ ಮಹಾಸ್ವಾಮಿಗಳ ಹೇಳಿದರು.
ಬೀದರ್: ಉಗ್ರರ ದಾಳಿ ಖಂಡಿಸಿ ಪಾಕ್ ಧ್ವಜ ರಸ್ತೆಗೆ ಅಂಟಿಸಿ ವಿಭಿನ್ನ ಪ್ರತಿಭಟನೆ!
ನಗರದ ಮೂರು ಸಾವಿರ ಮಠದ ಆವರಣದಲ್ಲಿಂದು ಶ್ರೀ ಜಯಂತಿ ಅಂಗವಾಗಿ ಕಾರ್ಯಕ್ರಮದ ಸಾನಿಧ್ಯವಹಿಸಿ ಷಟ್ ಸ್ಥಲ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು. ಇಂದಿನಿಂದ ಆರಂಭಗೊಂಡು ಏಪ್ರಿಲ್ 30 ರವರೆಗೆ ವಿವಿಧ ಕಾರ್ಯ ಕ್ರಮಗಳನ್ನ ಅತ್ಯಂತ ಯಶಸ್ವಿಯಾಗಿ ಅಪಾರ ಭಕ್ತರ ನಡುವೆ ನಡೆಸಿಕೊಂಡು ಹೋಗಬೇಕು ಎಂದರು.
ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷೆ ಗಿರಿಜಾ ಎಸ್. ಹೂಗಾರ ಮಾತನಾಡಿ, ಇಂದಿನಿಂದ ಬಸವ ಜಯಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇನ್ನು ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎನ್ ಕೌಂಟರ್ ಮಾಡಿದ ಪಿಎಸ್ ಐ ಅನಸೂಯಾ, ರಾಜ್ಯಕ್ಕೆ ಪಿಯುಸಿ ಯಲ್ಲಿ ಐದನೇ ರಾಂಕ್ ಪಡೆದ ವಿದ್ಯಾರ್ಥಿನಿ ನಾಗವೇಣಿ ಹಾಗೂ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವೀರಶೈವ ಸಂಘಟನಾ ಸಮಿತಿ ಅಧ್ಯಕ್ಷ ವೀರಣ್ಣ ಕಲ್ಲೂರ ಮುಂತಾದವರು ಅತಿಥಿಯಾಗಿ ಆಗಮಿಸಿದ್ದರು.
ರತ್ನಾ ಗಂಗಣ್ಣನರ, ನಿರ್ಮಲಾ ಅಂಗಡಿ ,ಶಂಕತಲಾ ಮುಗಳಿ , ಶಶಿಕಲಾ ಶಾಸ್ತ್ರೀಮಠ, ಮಂಜುಳಾ ಮೇಟಿ, ಸುಮಂಗಲಾ ದವಾಖಾನಿ ಜಯಲಕ್ಷ್ಮಿ ಉಮಚಗಿ, ಅನಸೂಯಾ ಅರಕೇರಿ, ರೇಖಾ ರಿತ್ತಿ, ನಿರ್ಮಲಾ ಹಿರೇಮಠ, ತಾರಾದೇವಿ ವಾಲಿ,ಗೀತಾ ಮುಳ್ಳೋಳ್ಳಿ, ಪ್ರಮೇಳಾದೇವಿ ಪಾಟೀಲ್, ಗೀತಾ ಶೆಟ್ಟರ್, ಚನ್ನಬಸಪ್ಪ ಧಾರವಾಡಶೆಟ್ಟರ, ಈರಪ್ಪ ಇತರರಿದ್ದರು.