ಹುಬ್ಬಳ್ಳಿ: ಗದಗ-ವಾಡಿ ರೈಲು ಮಾರ್ಗ ಹಾಗೂ ಕುಷ್ಟಗಿಯಿಂದ ಹುಬ್ಬಳ್ಳಿಗೆ ನೂತನ ಪ್ಯಾಸೆಂಜರ್ ರೈಲನ್ನು ಮೇ.೧೫ (ಗುರುವಾರ) ರಂದು ಲೋಕಾರ್ಪಣೆ ಮಾಡಲಿದ್ದೇವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಚಾಮರಾಜನಗರ:ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಸನ್ಮಾನ !
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧನೂರು ವಾಡಿ ಉತ್ತರ ಕರ್ನಾಟಕ ಭಾಗದ ಮಹತ್ವದ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಇದು ಮುಂಬಯಿ ಕರ್ನಾಟಕದಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ನೇರವಾಗಿ ರೈಲು ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಈ ಮಾರ್ಗವು ಮುಂದಿನ ದಿನಮಾನಗಳಲ್ಲಿ ಉತ್ತಮವಾದ ವಾಣಿಜ್ಯ ರೈಲು ಮಾರ್ಗಗಳಿಗೆ ಸಂಪರ್ಕ ಕೊಂಡಿಯಾಗಲಿದ್ದು, ಹುಬ್ಬಳ್ಳಿಯಿಂದ ಸೋಲಾಪುರ, ಹುಬ್ಬಳ್ಳಿಯಿಂದ ಬೀದರ್ ರೈಲು ಮಾರ್ಗಕ್ಕೆ ಇದು ಪರ್ಯಾಯ ಮಾರ್ಗ ಆಗಲಿದೆ. ಗದಗ ವಾಡಿ ರೈಲು ಮಾರ್ಗದ ತಳಕಲ್ ನಿಂದ ಕುಕನೂರು, ಯಲಬುರ್ಗಾ, ಕುಷ್ಟಗಿವರೆಗೆ ಸುಮಾರು ೫೮ ಕಿ.ಮೀ. ವರೆಗೆ ಕಾಮಗಾರಿ ಪೂರ್ಣಗೊಂಡಿದೆ ಎಂದರು. ವಾಡಿಯಿಂದ ಶಹಪುರ ವರೆಗೆ ರೈಲು ಮಾರ್ಗವು ೩ ರಿಂದ ೬ ತಿಂಗಳಲ್ಲಿ ಮುಕ್ತಾಯವಾಗಲಿದೆ. ಗದಗ ವಾಡಿ ರೈಲ್ವೆ ಯೋಜನೆಯಡಿ ಪೂರ್ಣಗೊಂಡಿರುವ ಗದಗ- ತಲ್ಮಾಲ್- ಕುಷ್ಟಗಿ ಮಾರ್ಗದ ೬೦ ಕಿ.ಮೀ. ಮಾರ್ಗ. ವಾಡಿಯಿಂದ ಶಹಾಪುರದವರೆಗಿನ ೪೫ ಕಿ.ಮೀ. ಉದ್ದದ ಮಾರ್ಗ ಕಾಮಗಾರಿ ನಡೆಯುತ್ತಿದೆ ಎಂದರು. ಇದರೊಟ್ಟಿಗೆ ಸಿಂಧನೂರು-ಗಿಣಿಗೇರ-ರಾಯಚೂರು ರೈಲು ಯೋಜನೆಯನ್ನೂ ಶೀಘ್ರದಲ್ಲೇ ಲೋಕಾರ್ಪಣೆ ಗೊಳಿಸಲಾಗುವುದು ಎಂದರು.
ಸಾರ್ವಭೌಮತೆ, ಅಖಂಡತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ. ಅಭಿವೃದ್ಧಿಯಲ್ಲಿ ಹಿಂದೆ ಬೀಳಬಾರದು ಎಂಬುದು ಪ್ರಧಾನಿಯ ಅಭಿಪ್ರಾಯವಾಗಿದೆ. ನಮ್ಮ ನೆಲಕ್ಕೇ ಬಂದು ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರಿಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸಿದ್ದೇವೆ. ಈ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವ ಮೊದಲು ಯೋಚನೆ ಮಾಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.