ಧಾರವಾಡ:- ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲೆ ಆಯೋಜಿಸಿದ 50 ವರ್ಷಗಳ ತುರ್ತು ಪರಿಸ್ಥಿತಿಯ ಕರಾಳ ದಿನಗಳ ಹೋರಾಟದ ಅನಾವರಣ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಸಚಿವ ಪ್ರಹ್ಲಾದ್ ಜೋಶಿ ಉದ್ಘಾಟನೆ ಮಾಡಿದರು. ಬಳಿಕ 50 ವರ್ಷಗಳ ಹಿಂದೆ ಸಂವಿಧಾನವನ್ನು ಬುಡ ಮೇಲು ಮಾಡಿ, 1975 ರಲ್ಲಿ ಇಂದಿರಾ ಗಾಂಧಿ ತಮ್ಮ ಅಧಿಕಾರದ ದಾಹದಿಂದ 2 ವರ್ಷಗಳ ಕಾಲ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿ, ವಾಕ್ ಸ್ವತಂತ್ರ ಕಿತ್ತುಕೊಂಡ ಕರಾಳ ದಿನಗಳ ಬಗ್ಗೆ ಮಾತನಾಡಿದರು.
ಕತ್ತಲೆಯತ್ತ ದೇಶವನ್ನು ತಳ್ಳಿದ ಕಾಂಗ್ರೆಸ್ ಪಕ್ಷ ವಾಕ್ ಸ್ವತಂತ್ರದ ನಿರ್ಬಂಧ ಹೇರಿ, ದೇಶದ ಲಕ್ಷಾಂತರ ಜನರನ್ನು ಬಂಧಿಸಿ ಸರ್ವಾಧಿಕಾರಿಯಂತೆ ವರ್ತಿಸಿದ ಇಂದಿರಾ ಗಾಂಧಿಯ ದುರಾಡಳಿತದ ಕಹಿ ಘಟನೆ, ಆ ಕರಾಳ ದಿನಗಳು ಇತಿಹಾಸದಲ್ಲಿ ಕಹಿ ನೆನಪುಗಳಾಗಿಯೇ ಉಳಿಯಲಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಕಾಂಗ್ರೆಸ್ ಪಕ್ಷ ಅಂದು – ಇಂದು ವಿಫಲವಾಗಿರುವುದು ಈ ದೇಶದ ದುರಂತದ ಕುರಿತಾಗಿ ಚರ್ಚಿಸಲಾಯಿತು
ಇದೇ ವೇಳೆ ತುರ್ತುಪರಿಸ್ಥಿತಿಯ ಸಮಯದಲ್ಲಿನ ಕರಾಳ ದಿನಗಳ ವಿರುದ್ದ ಹೋರಾಡಿದವರಿಗೆ ಸನ್ಮಾನಿಸಲಾಯಿತು. ಈ ವೇಳೆ ಶಾಸಕರಾದ ಶ್ರೀ ಅರವಿಂದ ಬೆಲ್ಲದ. ಮಾಜಿ ಶಾಸಕರಾದಸೀಮಾ ಮಸೂತಿ, ಪಾಲಿಕೆ ಸದಸ್ಯರು, ಹುಬ್ಬಳಿ ಧಾರವಾಡ ಮಹಾನಗರ ಜಿಲ್ಲಾ ಸದಸ್ಯರು, ಗಣ್ಯರು, ಬಿಜೆಪಿ ಜಿಲ್ಲಾ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.