ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಒಂದಿಲ್ಲೊಂದು ಸಮಸ್ಯೆಗಳು ಸಾರ್ವಜನಿಕರನ್ನು ಕಾಡುತ್ತಲೇ ಇದೆ. ಅದರಲ್ಲೂ ಮಳೆಗಾಲದಲ್ಲಿ ರಾಜಕಾಲುವೆ, ನಾಲಾಗಳ ಅವ್ಯವಸ್ಥೆ ಜನರ ಜೀವ ಹಿಂಡುತ್ತಿವೆ.ಮೇಯರ್ ನಾಲಾಗಳ ವೀಕ್ಷಣೆ ಕೈಗೊಂಡಿದ್ದು ಜನರ ಸಹನೆ ಕಟ್ಟೆ ಹೊಡೆದಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ ಕಛೇರಿ 7 ವ್ಯಾಪ್ತಿಯಲ್ಲಿ ಬರುವ ಹಲವು ನಾಲಾಗಳನ್ನು ಮಹಾಪೌರರಾದ ರಾಮಪ್ಪ ಬಡಿಗೇರ ಹಾಗೂ ಪಾಲಿಕೆಯ ಅಧಿಕಾರಿಗಳು ವೀಕ್ಷಿಸಿದರು. ಹೌದು.. ದೇಶಪಾಂಡೆನಗರ, ಕಮರಿಪೇಟೆಯಲ್ಲಿರುವ ನಾಲಾಗಳನ್ನು ವೀಕ್ಷಣೆ ಮಾಡಿದರು.
ನಿಮಗೂ ಈ ಸಮಸ್ಯೆ ಇದ್ಯಾ!? ಹಾಗಿದ್ರೆ ಆಲೂಗಡ್ಡೆ ಮುಟ್ಟಲೇಬೇಡಿ! ಇದು ತಿಳಿದ್ರೆ ಶಾಕ್ ಆಗ್ತೀರಾ!?
ಇದೇ ವೇಳೆ ನಾಲಾಗಳು ಸಂಪೂರ್ಣ ಬ್ಲಾಕ್ ಆಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿರುವ ಸಮಸ್ಯೆಗಳ ಅನಾವರಣವಾಗಿದೆ. ಇದೇ ವೇಳೆ ಸಾರ್ವಜನಿಕರು ಮೇಯರ್ ಹಾಗೂ ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸುಮಾರು ವರ್ಷಗಳಿಂದ ನಾಲಾಗಳ ಸಮಸ್ಯೆಗಳು ಪಾಲಿಕೆಯ ಮೆಟ್ಟಿಲೇರಿದ್ದರೂ ಕೂಡ ಸಮಸ್ಯೆಗೆ ಮಾತ್ರವೇ ಸ್ಪಂದನೆ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಜನರು ದುರ್ವಾಸನೆ, ಸಾಂಕ್ರಾಮಿಕ ರೋಗದ ಭೀತಿಯಿಂದ ಜೀವನ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಮೇಯರ್ ಸಿಟಿ ರೌಂಡ್ ಮಾಡಿದ್ದು, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಒಂದು ಕಾರ್ಯವೈಖರಿ ಎಷ್ಟರಮಟ್ಟಿಗೆ ಫಲ ಕೊಡುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.