ಹುಬ್ಬಳ್ಳಿ :– ಹುಬ್ಬಳ್ಳಿ ಮಹಾನಗರ ಸೆಂಟ್ರಲ್ 73 ಕ್ಷೇತ್ರದ ಗ್ಯಾರೆಂಟಿ ಯೋಜನೆಗಳ ಸಮಿತಿಯ ಸಭೆ ಯು ಅಧ್ಯಕ್ಷರಾದ ಅಬ್ದುಲ್ ಗನಿ ವಲಿ ಅಹಮದ್ ಮತ್ತು ಉಪ ಆಯುಕ್ತಾರಾದ ಇಸ್ಮೈಲ್ ಶಿರಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಭೆಯಲ್ಲಿ ಅನ್ನಭಾಗ್ಯದ ಅಧಿಕಾರಿಯಾದ ಏಡಿ ವಸುಂದರ ಹೆಗಡೆಯವರಿಗೆ ಕೆಲವೊಂದು ನ್ಯಾಯಬೆಲೆಗಳ ಅಂಗಡಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಸಾರ್ವಜನಿಕ ವಾಗಿ ಕೇಳಿ ಬರುತ್ತಿದ್ದು. ಇದರ ಸ್ಪಷ್ಟವಾದ ಮಾಹಿತಿ ಮತ್ತು ಕುಲಂಕುಶವಾಗಿ ಪರಿಶೀಲನೆ ಮಾಡಲು ಸೂಚಿಸಲಾಯಿತು. ಮತ್ತು ಇನ್ನೂ ಉಳಿದ ನ್ಯಾಯಬೆಲೆ ಅಂಗಡಿಗಳ ಸಭೆಯನ್ನು ಮಾಡಲು ಸೂಚಿಸಲಾಯಿತು.
ಜಿಎಸ್‌ಟಿ ಮತ್ತು ಐಟಿ ಇಂದ ಕೆಲ ಬಡವರಿಗೆ ಗ್ಯಾರೆಂಟಿ ಯೋಜನೆಗಳ ಸೌಲಭ್ಯ ವಂಚಿತರಾಗಿದ್ದಾರೆ. ಗೃಹಲಕ್ಷ್ಮಿಯ ಅಧಿಕಾರಿ ಸಿಡಿಪಿಓ ಅವರಿಗೆ ಕುಲಂಕುಶವಾಗಿ ಪರಿಶೀಲಿಸಿ ಮಾಹಿತಿ ನೀಡಲು ಸೂಚಿಸಲಾಯಿತು. ಇನ್ನುಳಿದ ಯುವ ನಿಧಿ, ಶಕ್ತಿ ಯೋಜನೆ ಮತ್ತು ಗ್ರಹ ಜ್ಯೋತಿ ತಮ್ಮ ಇಲಾಖೆಯ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿದರು ಈ ಸಭೆಯಲ್ಲಿ ಗ್ಯಾರೆಂಟಿಯ ಯೋಜನೆಯ ಸದಸ್ಯರು ಹಾಗೂ ಐದು ಗ್ಯಾರಂಟಿ ಯೋಜನೆ ಅಧಿಕಾರಿಗಳು ಉಪಸ್ಥಿತರಿದ್ದರ.