ಹುಬ್ಬಳ್ಳಿ: ಉದ್ಯಮಿಗಳಿಗೆ ಹಾಗೂ ಆತ್ಮ ನಿರ್ಭರ ಭಾರತ ಅಭಿಯಾನ ಕಿರು ಉದ್ಯೋಗದಿಂದ ಸ್ವಾವಲಂಬಿ ಬದುಕಿಗಾಗಿ ಕೇಂದ್ರ ಸರ್ಕಾರ ಆತ್ಮ ನಿರ್ಭರ ಭಾರತ ಅಭಿಯಾನ ಕಿರು ಆಹಾರ ಸಂರಕ್ಷಣಾ ಉದ್ದಿಮೆಗಳ ಔಪಚಾರೀಕ ಯೋಜನೆ ಅತ್ಯಂತ ಉಪಯುಕ್ತವಾದ ಯೋಜನೆ ಆಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅಭಿಪ್ರಾಯಪಟ್ಟರು.
ನಗರದ ಲಿಂಗರಾಜನಗರದಲ್ಲಿ ಬಸವೇಶ್ವರ ಜಯಂತಿ ದಿನದಂದು ಯುವ ಉದ್ಯಮಿ ಕುಮಾರ ಧೀರಜ್ ಶಿವಯೋಗಿ ಮುಗಬಸ್ತ ಅವರ
ಮಸಾಲೆ ಪದಾರ್ಥಗಳ ತಯಾರಿಕೆ ಘಟಕ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಅವರು ಮಾತನಾಡಿದರು, ಕೇಂದ್ರ ಸರ್ಕಾರ ಇಂತಹ ಅನೇಕ ಉದ್ಯೋಗ ಹಾಗೂ ಉದ್ಯಮ ಕ್ಷೇತ್ರಕ್ಕೆ ಅನುಕೂಲ ಆಗಲೆಂದು ಜಾರಿ ಮಾಡಿದ್ದು ಅದು ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ವಿದ್ಯುನ್ಮಾನ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕಲ್ಮೇಶ ಮಂಡ್ಯಾಳ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಸ್ಥಳೀಯ
ಎಸ್ ಬಿಐ ಬ್ಯಾಂಕ್ ಸಹಕಾರದಿಂದ ಯುವಕ ಉದ್ಯೋಗ ಪ್ರಾರಂಭಿಸಿದ್ದು ಅತ್ಯಂತ ಉಪಯುಕ್ತ ಆಗಿದೆ. ಇದು ನಿರುದ್ಯೋಗ ಯುವಕ ಹಾಗೂ ಯುವತಿಯರಿಗೆ ಸ್ಪೂರ್ತಿದಾಯಕ ಎಂದರು.
ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಚಲನಚಿತ್ರ ನಟ ಕೃಷ್ಣ ಚಿಕ್ಕತುಂಬಳ, ಶಿವಶಂಕರಪ್ಪ ಮೂಗಬಸ್ತ, ಪತ್ರಕರ್ತ ಬಸವರಾಜ ಗೋಕಾವಿ ಮುಂತಾದವರು ಉಪಸ್ಥಿತರಿದ್ದರು.