ಹುಬ್ಬಳ್ಳಿ : ರಾಜ್ಯದ ವಾಣಿಜ್ಯ ನಗರಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ
ಹುಬ್ಬಳ್ಳಿಯ ಹಳೆ ಸಿಎಆರ್ ಮೈದಾನದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಕಮಿಷನರ್ ಶಶಿಕುಮಾರ್ ರೌಡಿಶೀಟರ್ ಗಳಿಗೆ ಫುಲ್ ಕ್ಲಾಸ್ ತಗೊಂಡಿದ್ದಾರೆ.
ರಾಜ್ಯದಲ್ಲಿ ರೌಡಿ ಶೀಟರ್ ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 1,700 ರೌಡಿಶೀಟರ್ ಗಳನ್ನ ಕರೆತರಲಾಗಿದೆ. ಸಾರ್ವಜನಿಕ ಶಾಂತಿ, ನೆಮ್ಮದಿ ಭಂಗ ಆಗದಂತೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ವೈಲೆಂಟ್ ಆರೋಪಿಗಳ ಮೇಲೆ ರೌಡಿ ಶೀಟರ್ ಹಾಕಲಾಗುವುದು. ಜತೆಗೆ ಗಡಿಪಾರು, ಗುಂಡಾ ಆಕ್ಟ್ ಮಾಡುವ ಕೆಲಸ ಮಾಡ್ತಾ ಬಂದಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ ರೌಡಿ ಶೀಟರ್ ಗಳು ಸಾರ್ವಜನಿಕರ ಮೇಲೆ ಹಲ್ಲೆ, ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಪರೆಡ್ ಮಾಡಲಾಗಿದೆ. ಪ್ರತಿ ಠಾಣೆ ವ್ಯಾಪ್ತಿಯಲ್ಲಿ 50-60 ರಿಂದ 200ರವರೆಗೆ ರೌಡಿ ಶೀಟರ್ ಇದ್ದಾರೆ. 50 ಜನರನ್ನ ಬೀದರ್ , ಕಲಬುರಗಿ, ಚಾಮರಾಜನಗರ ಸೇರಿ ಹಲವೆಡೆ ಗಡಿಪಾರು ಮಾಡಿದ್ದೇವೆ. ಅವರು ಗಡಿಪಾರು ಮಾಡಿದ ವ್ಯಾಪ್ತಿಯಲ್ಲಿ ಇದ್ದಾರಾ ಅಂತ ಸಹ ನಾವು ಪರಿಶೀಲನೆ ಮಾಡಿದ್ದೇವೆ. ಮಾರಕಾಸ್ತ್ರ ಇಟ್ಟುಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ಕ್ರಮ ಕಗೊಂಡಿದ್ದೇವೆ ಎಂದು ಶಶಿಕುಮಾರ್ ಹೇಳಿದ್ದಾರೆ.
ಓವರ್ ಟೇಕ್ ಮಾಡಲು ಹೋಗಿ ಅಪಘಾತ: ಎದೆ ಝಲ್ ಅನಿಸುವ ಡೆಡ್ಲಿ ಆಕ್ಸಿಡೆಂಟ್ ವಿಡಿಯೋ ಇದೆ
2025ರಲ್ಲಿ ಹೊಸದಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಸಹ ಗಡಿಪಾರು ಹಾಗೂ ಗುಂಡಾ ಆಕ್ಟ್ ಹಾಕಲಾಗಿದೆ. ರೌಡಿ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆ ಸಹ ಆರಂಭ ಮಾಡಿದ್ದೇವೆ. ಕೆಲವರದ್ದು 2,000 ಇಸ್ವಿಯಲ್ಲಿ ಆಗಿದೆ, 65 ವರ್ಷದ ಮೇಲಿನವರನ್ನ ಸಹ ಗಣನೆಗೆ ತೆಗೆದುಕೊಂಡಿದ್ದೇವೆ ಎಂದು ಕಮಿಷನರ್ ತಿಳಿಸಿದರು.