ಬೆಂಗಳೂರು: ನೇರಳೆ ಹಣ್ಣು ಇದು ಅನೇಕ ದೇಶಗಳಲ್ಲಿ ಜನಪ್ರಿಯವಾಗಿರುವ ಕಾಲೋಚಿತ ಹಣ್ಣು . ಇದು ಸಿಹಿ, ಹುಳಿ ಮತ್ತು ಒಗರು ರುಚಿಗೆ ಹೆಸರುವಾಸಿಯಾಗಿದೆ ಮತ್ತು ಇದನ್ನು ಹೆಚ್ಚಾಗಿ ಸಿಹಿತಿಂಡಿಗಳು, ಜಾಮ್ಗಳು ಮತ್ತು ಪಾನೀಯಗಳಲ್ಲಿ ಬಳಸಲಾಗುತ್ತದೆ. ಅದರಂತೆ ಕರ್ನಾಟಕದ ನೇರಳೆಹಣ್ಣು ವಿದೇಶಗಳಿಗೆ ಭಾರೀ ಪ್ರಮಾಣದಲ್ಲಿ ರಫ್ತಾಗುವ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ.
ಹೌದು ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆಯಾಗಿರುವ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು(APEDA) ಕರ್ನಾಟಕದಿಂದ ಲಂಡನ್ ಗೆ ತಾಜಾ ನೇರಳೆ ಹಣ್ಣುಗಳ ರಫ್ತಿಗೆ ಚಾಲನೆ ನೀಡಿದೆ. ಇದೇ ಮೊದಲ ಬಾರಿಗೆ ನೇರಳೆ ಹಣ್ಣನ್ನು ಲಂಡನ್ ಗೆ ಕರ್ನಾಟಕದಿಂದ ರಫ್ತು ಮಾಡಲಾಗುತ್ತದೆ.
Namma Nerale Goes Global!
For the first time ever, fresh #Jamun from #Karnataka has been exported to London – a proud milestone for our farmers and for the state.
This consignment marks more than just a shipment – it signals a growing future.
Because this isn’t just about one… pic.twitter.com/yD5nkwpeXq
— DK Shivakumar (@DKShivakumar) June 24, 2025
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಜಮ್ಮು-ಕಾಶ್ಮೀರದಿಂದ ಸೌದಿ ಅರೇಬಿಯಾ ಮತ್ತು ಯು ಎ ಇ ಗೆ ನೇರಳೆ ಹಣ್ಣನ್ನು ರಫ್ತು ಮಾಡಲಾಗುತ್ತದೆ. ಇದರಿಂದ ತೋಟ ಬೆಳೆಗಾರರ ಮಾರುಕಟ್ಟೆ ವ್ಯಾಪ್ತಿಯು ವಿಸ್ತಾರಗೊಳ್ಳುತ್ತದೆ ಎಂದು ಸಹ ಹೇಳಿದ್ದರು.
ಇನ್ನೂ ಈ ಕುರಿತು ಡಿಸಿಎಂ ಡಿ.ಕೆ ಶಿವಕುಮಾರ್ ಟ್ವೀಟ್ ಮಾಡಿದ್ದು, ನಮ್ಮ ನೆರಳೆ ಜಾಗತಿಕ ಮಟ್ಟಕ್ಕೆ! ಮೊದಲ ಬಾರಿಗೆ, #ಕರ್ನಾಟಕದ ತಾಜಾ #ಜಾಮುನ್ ಅನ್ನು ಲಂಡನ್ಗೆ ರಫ್ತು ಮಾಡಲಾಗಿದೆ – ಇದು ನಮ್ಮ ರೈತರಿಗೆ ಮತ್ತು ರಾಜ್ಯಕ್ಕೆ ಹೆಮ್ಮೆಯ ಮೈಲಿಗಲ್ಲು.
ಈ ರವಾನೆಯು ಕೇವಲ ಸಾಗಣೆಗಿಂತ ಹೆಚ್ಚಿನದನ್ನು ಸೂಚಿಸುತ್ತದೆ – ಇದು ಬೆಳೆಯುತ್ತಿರುವ ಭವಿಷ್ಯವನ್ನು ಸೂಚಿಸುತ್ತದೆ. ಏಕೆಂದರೆ ಇದು ಕೇವಲ ಒಂದು ಹಣ್ಣಿನ ಬಗ್ಗೆ ಅಲ್ಲ. ಇದು ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಜಾಗತಿಕ ಮಾರುಕಟ್ಟೆಗಳನ್ನು ಅನ್ಲಾಕ್ ಮಾಡುವುದು ಮತ್ತು ಕರ್ನಾಟಕದ ಮಣ್ಣಿನ ಶ್ರೀಮಂತಿಕೆಯನ್ನು ಜಗತ್ತಿಗೆ ಪ್ರದರ್ಶಿಸುವ ಬಗ್ಗೆ ಎಂದು ಟ್ವೀಟ್ ಮಾಡಿದ್ದಾರೆ.