Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಒಪ್ಪೋ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ: ಕೊಂಡುಕೊಳ್ಳಲು ಮುಗಿಬಿದ್ದ ಗ್ರಾಹಕರು

    By Author AINApril 20, 2024
    Share
    Facebook Twitter LinkedIn Pinterest Email
    Demo

    ಮಾರುಕಟ್ಟೆಗೆ ದಿನಕ್ಕೊಂದು ಹೊಸ ರೀತಿಯ, ಹೊಸ ಮಾಡೆಲ್ ನ ಮೊಬೈಲ್ ಫೋನ್ ಗಳು ಆಗಮಿಸುತ್ತಿರುತ್ತವೆ. ಇದರಿಂದ ಗ್ರಾಹಕರು ಯಾವ ಫೋನ್ ಕೊಳ್ಳೋದು ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಅದೇ ಕಾರಣಕ್ಕೆ ಮೊಬೈಲ್ ಕಂಪೆನಿಗಳು ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡುತ್ತಿರುತ್ತಾರೆ. ಅಂತೆಯೇ ಇದೀಗ ಫ್ಲಿಪ್‌ಕಾರ್ಟ್‌ ತಾಣವು ಒಪ್ಪೋ ಸಂಸ್ಥೆಯ ಜನಪ್ರಿಯ ಫೋನ್‌ಗಳಲ್ಲಿ ಒಂದಾದ ಒಪ್ಪೋ A78 ಫೋನಿಗೆ ಸಖತ್ ರಿಯಾಯಿತಿ ನೀಡಿದೆ.

    ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ವೆಬ್‌ಸೈಟ್‌ ನಲ್ಲಿ ಒಪ್ಪೋ A78 ಫೋನ್‌ ಶೇ. 32% ರಷ್ಟು ನೇರ ರಿಯಾಯಿತಿ ಪಡೆದುಕೊಂಡಿದೆ. ಈ ಫೋನಿನ 8 GB RAM + 128 GB ಸ್ಟೋರೇಜ್‌ ವೇರಿಯಂಟ್‌ 15,499ರೂ. ಗಳ ಕೊಡುಗೆಯ ದರದಲ್ಲಿ ಖರೀದಿಗೆ ಲಭ್ಯ ಇದೆ. ಇದಲ್ಲದೇ ವೆಬ್‌ಸೈಟ್‌ನಲ್ಲಿ ಲಭ್ಯ ಇರುವ ಇತರೆ ಆಫರ್‌ಗಳನ್ನು ಪಡೆದುಕೊಂಡರೆ, ಈ ಫೋನ್‌ ಇನ್ನಷ್ಟು ಗ್ರಾಹಕಸ್ನೇಹಿ ಬೆಲೆಯಲ್ಲಿ ಲಭ್ಯವಾಗಲಿದೆ.

    ಈ ಫೋನ್‌ ಸ್ಯಾಮ್‌ ಡ್ರಾಗನ್‌ 680 ಪ್ರೊಸೆಸರ್‌ ಅನ್ನು ಪಡೆದಿದ್ದು, 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದುಕೊಂಡಿದೆ. ಅಲ್ಲದೇ 50 ಮೆಗಾಪಿಕ್ಸೆಲ್ ಸೆನ್ಸಾರ್‌ನ ಪ್ರಾಥಮಿಕ ಕ್ಯಾಮೆರಾ ಆಯ್ಕೆ ಸಹ ಇದೆ.

    ಒಪ್ಪೋ A78 ಮೊಬೈಲ್‌ 6.56 ಇಂಚಿನ HD+ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1,612 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ಇದು 90Hz ರಿಫ್ರೆಶ್‌ ರೇಟ್‌ ಬೆಂಬಲಿಸಲಿದ್ದು, 600 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ.

    ಒಪ್ಪೋ A78 ಮೊಬೈಲ್‌ ಸ್ಯಾಮ್‌ಡ್ರಾಗನ್‌ 680 ಪ್ರೊಸೆಸರ್‌ ಪವರ್‌ ಅನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 12 ಆಧಾರಿತ ಕಲರ್‌ಒಎಸ್‌ 12.1 ನಲ್ಲಿ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಅನ್ನು ಸಪೋರ್ಟ್ ಮಾಡುತ್ತದೆ. ಇದರಲ್ಲಿ ಆನ್‌ಬೋರ್ಡ್‌ ಸ್ಟೋರೇಜ್‌ ಬಳಸಿಕೊಂಡು 5GB ವರೆಗೆ RAM ವಿಸ್ತರಿಸಬಹುದು.

    ಒಪ್ಪೋ A78 ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಪೋಟ್ರೇಟ್ ಸೆನ್ಸಾರ್ ಜೊತೆಗೆ f/2.4 ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾಗಳು 30fps ನಲ್ಲಿ ಫುಲ್‌ HD ವೀಡಿಯೊಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಪಡೆದಿವೆ.

    ಒಪ್ಪೋ A78 ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಇದು 33W ಸೂಪರ್‌ ವೂಕ್‌ ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಮಾಡಲಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಇದು ವೈ ಫೈ 5 ಮತ್ತು ಬ್ಲೂಟೂತ್ v5.3 ವಾಯರ್‌ಲೆಸ್ ಕನೆಕ್ಟಿವಿಟಿ ಅನ್ನು ನೀಡುತ್ತದೆ. ಅಲ್ಲದೆ ಯುಎಸ್‌ಬಿ ಟೈಪ್ ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಪೋರ್ಟ್‌ ಇದೆ.

    ಹಾಗೆಯೇ ಒಪ್ಪೋ A78 ಸ್ಮಾರ್ಟ್‌ಫೋನ್‌ 8GB + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಮೊಬೈಲ್‌ ಅನ್ನು ಬ್ಲ್ಯಾಕ್ ಮತ್ತು ಬ್ಲೂ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರು ಸೇಫ್‌ ಅಲ್ಲ ಅನ್ನೋವರು ಈ ಸುದ್ದಿ ಓದಲೇಬೇಕು..ರಾಜಧಾನಿ ಅತ್ಯಂತ ಸುರಕ್ಷಿತ ನಗರ ಎಂದ ಸರ್ವೇ

    May 14, 2025

    ಸೂಪರ್ ಆಫರ್.. 1 ರೂಪಾಯಿ ಹೆಚ್ಚು ಖರ್ಚು ಮಾಡಿದ್ರೆ ಅಮೆಜಾನ್ ಪ್ರೈಮ್ ಉಚಿತ..! 84 ದಿನಗಳವರೆಗೆ 5G ಡೇಟಾ ಪ್ಲಾನ್

    May 14, 2025

    LIC Plan: LIC ಯ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿ ಪ್ರತಿ ತಿಂಗಳು 1 ಲಕ್ಷ ರೂ. ಪಿಂಚಣಿ ಪಡೆಯಿರಿ!

    May 14, 2025

    Gold Silver Price: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌: ಚಿನ್ನದ ಬೆಲೆ ಮತ್ತೆ ಇಳಿಕೆ, ಬೆಂಗಳೂರಿನಲ್ಲಿ ಎಷ್ಟಿದೆ ದರ?

    May 13, 2025

    ಪಾಕಿಸ್ತಾನದಲ್ಲಿ ಇಂಟರ್ನೆಟ್ ಬೆಲೆ ಎಷ್ಟು ಗೊತ್ತಾ? 1GB ಡೇಟಾ ಬೆಲೆ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ..!

    May 13, 2025

    Driving Licence: ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿದೆಯೇ..? ಹೀಗೆ ಮಾಡಿ ಸಾಕು ನಿಮ್ಮ ಮನೆಗೆ ಡೂಪ್ಲಿಕೇಟ್ DL ಬರುತ್ತೆ.!

    May 13, 2025

    Aadhaar Update: ಆಧಾರ್‌ʼನಲ್ಲಿ ಮೊಬೈಲ್ ಸಂಖ್ಯೆಯನ್ನು ಹೇಗೆ ನವೀಕರಿಸುವುದು..? ತುಂಬಾ ಸಿಂಪಲ್‌

    May 12, 2025

    India-Pakistan: ಯುದ್ಧ ಭೀತಿಯಿಂದ ಬಂದ್‌ ಆಗಿದ್ದ ಭಾರತದ 32 ಏರ್‌ ಪೋರ್ಟ್‌ʼಗಳು ಓಪನ್.!

    May 12, 2025

    Gold Rate Today: ಅಪರಂಜಿ ಚಿನ್ನದ ಬೆಲೆ ಮತ್ತೆ ಏರಿಕೆ.! ಇಂದಿನ ಚಿನ್ನ ಬೆಳ್ಳಿ ದರ ಪಟ್ಟಿ ಇಲ್ಲಿದೆ

    May 11, 2025

    ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ಬದಲಾವಣೆಗಳು: ಇಲ್ಲಿದೆ ಚಾರ್ಜ್ ಮಾಡದೆ 50 ವರ್ಷಗಳ ಕಾಲ ಕೆಲಸ ಮಾಡುವ ಬ್ಯಾಟರಿ!

    May 11, 2025

    ಭಾರತೀಯ ವಾಯುಪಡೆ ದಾಳಿ: ಪಾಕಿಸ್ತಾನದಲ್ಲಿ ತೈಲ ಬಿಕ್ಕಟ್ಟು – ರಾಜಧಾನಿಯಲ್ಲಿ ಪೆಟ್ರೋಲ್ ಬಂಕ್‌ʼಗಳು ಬಂದ್

    May 10, 2025

    Delhi Airport: ಭಾರತ-ಪಾಕ್ ಪರಿಸ್ಥಿತಿ ಉದ್ವಿಗ್ನಗೊಂಡ ಬೆನ್ನಲ್ಲೇ 138 ವಿಮಾನಗಳ ಹಾರಾಟ ರದ್ದು..!

    May 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.