ಬೆಂಗಳೂರು:- ಅಡುಗೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಎದುರಾಗಿದ್ದು, ಬೆಂಗಳೂರಲ್ಲಿ ತೆಂಗಿನ ಕಾಯಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ತೆಂಗಿನಕಾಯಿ ಬೆಲೆ ಗರಿಷ್ಠ ಮಟ್ಟಕ್ಕೆ ಹೋಗಿದ್ದು, ತೆಂಗಿನಕಾಯಿ ಕೊಳ್ಳುವುದು ಜೇಬಿಗೆ ಭಾರವಾಗಿದೆ.
ದೈನಂದಿನ ಜೀವನದಲ್ಲಿ ತೆಂಗಿನಕಾಯಿ ಬಳಸುವ ಗ್ರಾಹಕರಿಗೆ ಭಾರೀ ಹೊಡೆತ ಬಿದ್ದಿದೆ. ಪ್ರತಿ ಕೆ.ಜಿ.ಗೆ ₹65 ರಿಂದ ₹85ರಂತೆ ತೆಂಗಿನಕಾಯಿ ಮಾರಾಟವಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ತೆಂಗಿನಕಾಯಿ ಅತ್ಯಧಿಕ ದರ ತಲುಪಿದೆ. ಅಲ್ಲದೇ ಶತಕ ಬಾರಿಸುವ ಹಂತಕ್ಕೆ ಬಂದಿದೆ.
ಈ ಬಾರಿ ಬೇಸಿಗೆಯಲ್ಲಿ ಕರ್ನಾಟಕದ ಎಳನೀರಿಗೆ ನಮ್ಮ ರಾಜ್ಯ ಹಾಗೂ ಬೇರೆ ರಾಜ್ಯಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆಯಲ್ಲಿ ಈಗ ತೆಂಗಿನಕಾಯಿಯ ಇಳುವರಿ ಕಡಿಮೆ ಆಗಿದೆ