ಬೆಂಗಳೂರು:- ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಕರ್ನಾಟಕದ ವಿವಿಧೆಡೆ ಭ್ರಷ್ಟರ ಬೇಟೆ ಆರಂಭಿಸಿದ್ದಾರೆ. ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 12 ಕಡೆ ಲೋಕಾಯುಕ್ತ ದಾಳಿ ಮಾಡಿದೆ. ತುಮಕೂರಿನಲ್ಲಿ 7, ಬೆಂಗಳೂರು ಗ್ರಾಮಾಂತರ 8, ಯಾದಗಿರಿ 5, ಮಂಗಳೂರು 4, ವಿಜಯಪುರದಲ್ಲಿ 4 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಎಲ್ಲೆಲ್ಲಿ?
1.ತುಮಕೂರು, ರಾಜಶೇಖರ್, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ..
2.ಮಂಗಳೂರು: ಮಂಜುನಾಥ್, ಸರ್ವೆ ಮೇಲ್ವಿಚಾರಕರು, ದ.ಕ..
3.ವಿಜಯಪುರ : ಶ್ರೀಮತಿ ರೇಣುಕಾ. ಸಾತರ್ಲೆ, ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ..
4 ಬೆಂಗಳೂರು ನಗರ : ಮುರಳಿ ಟಿವಿ, ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ..
5.ಬೆಂಗಳೂರು: ಎಚ್ ಆರ್ ನಟರಾಜ್, ಇನ್ಸ್‌ಪೆಕ್ಟರ್, ಕಾನೂನು ಮಾಪನಶಾಸ್ತ್ರ..
6.ಬೆಂಗಳೂರು ಗ್ರಾಮಾಂತರ, ಅನಂತ್ ಕುಮಾರ್ SDA, ಹೊಸಕೋಟೆ ತಾಲೂಕು ಕಛೇರಿ..
7.ಯಾದಗಿರಿ: ಉಮಾಕಾಂತ್, ಶಹಾಪುರ ತಾಲೂಕು, ಯಾದಗಿರಿ..