ವಿಶಾಖಪಟ್ಟಣಂನ ಮಧುರವಾಡ ಆರ್ಟಿಸಿ ಕಾಲೋನಿಯಲ್ಲಿ ಒಂದು ಭಯಾನಕ ಘಟನೆ ನಡೆದಿದೆ. 9 ತಿಂಗಳ ಗರ್ಭಿಣಿ ಅನುಷಾಳನ್ನು ಆಕೆಯ ಪತಿಯೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೌದು ವಿಶಾಖಪಟ್ಟಣಂನ ಪಿಎಂ ಪಾಲೆಂನ ಉಡಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಆರೋಪಿ ಪತಿ ನಗರದ ಸ್ಕೌಟ್ಸ್ ಮತ್ತು ಸಾಗರ್ನಗರ ವೀಕ್ಷಣಾ ಕೇಂದ್ರದ ಬಳಿ ಫಾಸ್ಟ್ ಫುಡ್ ಸೆಂಟರ್ ನಡೆಸುತ್ತಿದ್ದರು.
ಕಳೆದ ಮೂರು ವರ್ಷಗಳ ಹಿಂದೆ ಅನುಷಾಳೊಂದಿಗೆ ಪ್ರೇಮ ವಿವಾಹವಾಗಿದ್ದರು. ಬಳಿಕ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿ ದಂಪತಿ ಆಗಾಗ ಜಗಳವಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ.
ಬಿಳಿ ಕೂದಲು ಬುಡದಿಂದಲೇ ಕಡು ಕಪ್ಪಾಗ್ಬೇಕಾ!? ಈ ಹಣ್ಣಿನ ಗಿಡದ ಎಲೆಯನ್ನು ನೀರಲ್ಲಿ ಕುದಿಸಿ ತಲೆಗೆ ಹಚ್ಚಿ ಸಾಕು!
ನನಗೆ ಕ್ಯಾನ್ಸರ್ ಇದೆ, ನಾನು 1 ವರ್ಷದಲ್ಲಿ ಸಾಯುತ್ತೇನೆ. ನೀನು ನಿನ್ನ ಜೀವನ ಹಾಳು ಮಾಡಿಕೊಳ್ಳಬೇಡ. ಅಪ್ಪ-ಅಮ್ಮನ ಜೊತೆ ಹೋಗು ಎಂದು ಕೂಡ ಜ್ಞಾನೇಶ್ವರ್ ನಾಟಕವಾಡಿದ್ದ. ಆದರೆ, ಅನುಷಾ ನಿನ್ನೊಂದಿಗೆ ಇರುತ್ತೇನೆ ಎಂದು ಹೇಳಿದ್ದಳು. ಅದಾದ 6 ತಿಂಗಳ ನಂತರ, ಅವನು ಮತ್ತೊಂದು ನಾಟಕವನ್ನು ಪ್ರಾರಂಭಿಸಿದ್ದ. ನನ್ನ ಹೆತ್ತವರಿಗೆ ನಮ್ಮ ಮದುವೆ ಇಷ್ಟವಿಲ್ಲ, ಅವರು ನಿನ್ನನ್ನು ಮತ್ತು ನನ್ನನ್ನು ಬದುಕಲು ಬಿಡುವುದಿಲ್ಲ. ಹೀಗಾಗಿ ವಿಚ್ಛೇದನ ಪಡೆದುಕೊಳ್ಳೋಣ ಎಂದು ಕೇಳಿದ್ದ. ಆದರೆ ಅನುಷಾ ಅದಕ್ಕೆ ಒಪ್ಪಲಿಲ್ಲ.
ಜ್ಞಾನೇಶ್ವರ್ ಆಕೆಯನ್ನು ಬಿಟ್ಟು ತನ್ನ ಪೋಷಕರ ಬಳಿ ಹೋಗಲು ನಿರ್ಧರಿಸಿದ್ದ. ಹೀಗಾಗಿ, ಆಕೆಯ ಬಳಿಕ ವಿಚ್ಛೇದನ ಕೇಳುತ್ತಿದ್ದ. ಆದರೆ, ಇದರ ನಡುವೆ ಅನುಷಾ ಗರ್ಭಿಣಿಯಾಗಿದ್ದಳು. ಆಗಲೂ ಆಕೆಗೆ ಮಾನಸಿಕ ಹಿಂಸೆ ನೀಡುತ್ತಿದ್ದ.
ಬೆಳಗ್ಗೆ ಆಕೆ ಆತ ಕತ್ತು ಹಿಸುಕಿದ್ದರಿಂದ ಪ್ರಜ್ಞೆ ತಪ್ಪಿದಾಗ ಆಕೆಯ ಮನೆಯವರಿಗೆ ಫೋನ್ ಮಾಡಿ ಅನುಷಾಳಿಗೆ ಹುಷಾರಿಲ್ಲ ಎಂದು ಹೇಳಿದ್ದ. ತಕ್ಷಣ ಬಂದ ಆಕೆಯ ಪೋಷಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು.
ಆದರೆ, ಜ್ಞಾನೇಶ್ವರ್ ವರ್ತನೆಯಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಿಚಾರಣೆ ಮಾಡಿದಾಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಘಟನೆಯ ಬಳಿಕ ಆರೋಪಿ ಪತಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.