2025ರ ಐಪಿಎಲ್ ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಹೈದರಾಬಾದ್ಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಅದರಂತೆ ಹೈದರಾಬಾದ್ ಕೂಡ ಡೆಲ್ಲಿ ತಂಡವನ್ನು 133 ರನ್ಗಳಿಗೆ ಕಟ್ಟಿಹಾಕಿ ಗೆಲ್ಲುವ ವಿಶ್ವಾಸ ಮೂಡಿಸಿತ್ತು. ಆದರೆ ಹೈದರಾಬಾದ್ನ ಈ ಗೆಲುವಿನ ಕನಸಿಗೆ ಅಡ್ಡಿಯಾದ ಮಳೆ ಪಂದ್ಯವನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಸನ್ರೈಸರ್ಸ್ ಹೈದರಾಬಾದ್ ತಂಡ ಈ ಸೀಸನ್ನಲ್ಲಿ ಲೀಗ್ ಹಂತದಲ್ಲೇ ತನ್ನ ಪ್ರಯಾಣವನ್ನು ಅಧಿಕೃತವಾಗಿ ಅಂತ್ಯಗೊಳಿಸಿದೆ.
ಕ್ಷಮಿಸಿ ಕರ್ನಾಟಕ, ನನಗೆ ನಿಮ್ಮ ಪ್ರೀತಿ ದೊಡ್ಡದು: ಕೊನೆಗೂ ಕ್ಷಮೆಯಾಚಿಸಿದ ಸೋನು ನಿಗಮ್!
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ಆದರೆ, ಮಳೆಯಿಂದಾಗಿ ಹೈದರಾಬಾದ್ ತಂಡದ ಇನಿಂಗ್ಸ್ ಆರಂಭವಾಗಲಿಲ್ಲ. ಇದರೊಂದಿಗೆ, ಪ್ಯಾಟ್ ಕಮ್ಮಿನ್ಸ್ ತಂಡವು ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದು, ಅಕ್ಷರ್ ಪಟೇಲ್ ತಂಡದ ಭರವಸೆ ಇನ್ನೂ ಜೀವಂತವಾಗಿದೆ.
ಪಂದ್ಯದಲ್ಲಿ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿತು. ದೆಹಲಿ ಪರ ಟ್ರಿಸ್ಟಾನ್ ಸ್ಟಬ್ಸ್ ಮತ್ತು ಅಶುತೋಷ್ ಶರ್ಮಾ ತಲಾ 41 ರನ್ಗಳ ಇನ್ನಿಂಗ್ಸ್ ಆಡಿದರೆ, ವಿಪ್ರಾಜ್ ನಿಗಂ 18 ರನ್ಗಳ ಕಾಣಿಕೆ ನೀಡಿದರು. ಉಳಿದಂತೆ ತಂಡದ ಯಾವೊಬ್ಬ ಬ್ಯಾಟರ್ಗೂ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ಡೆಲ್ಲಿ ತಂಡವನ್ನು ಅಲ್ಪ ರನ್ಗಳಿಗೆ ಕಟ್ಟಿಹಾಕಿದ್ದ ಹೈದರಾಬಾದ್ ಅರ್ಧಪಂದ್ಯವನ್ನು ಗೆದ್ದ ಖುಷಿಯಲ್ಲಿತ್ತು. ಆದರೆ ಮೊದಲ ಇನ್ನಿಂಗ್ಸ್ ಮುಗಿದ ತಕ್ಷಣ, ಹೈದರಾಬಾದ್ನಲ್ಲಿ ಮಳೆ ಸುರಿಯಲು ಪ್ರಾರಂಭಿಸಿತು. ಈ ಮಳೆ ಬಹಳ ಸಮಯದ ನಂತರ ನಿಂತಿತು. ಆಗಾಗಿ ಪಂದ್ಯವನ್ನು ಆರಂಭಿಸಲು ಮೈದಾನದ ಸಿಬ್ಬಂದಿ ತಮ್ಮ ಕೈಲಾದಷ್ಟು ಪ್ರಯತ್ನಿಸಿದರಾದರೂ ಅದರಲ್ಲಿ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲು ತೀರ್ಮಾನಿಸಿದರು.