ಬೆಂಗಳೂರು:- ನಾನೊಬ್ಬ ಸ್ವಾಭಿಮಾನಿ. ನನ್ನನ್ನು ದುರಹಂಕಾರಿ ಅಂದ್ರೂ ಡೋಂಟ್ ಕೇರ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಆಘಾತಕಾರಿ ಘಟನೆ: ರೈಲು ಡಿಕ್ಕಿ ಹೊಡೆದು ಛಿದ್ರ-ಛಿದ್ರವಾದ 6 ದನಗಳ ದೇಹ!
ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠ, ಶಾಖಾಮಠ, ಕೇತೋಹಳ್ಳಿ ಬೆಂಗಳೂರಿನ ಭಕ್ತ ಭಂಡಾರದ ಕುಟೀರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನನ್ನನ್ನು ದುರಹಂಕಾರಿ ಎನ್ನುತ್ತಾರೆ. ಐ ಡೋಂಟ್ ಕೇರ್, ನಾನು ಸ್ವಾಭಿಮಾನಿ. ನಮ್ಮ ಸಮುದಾಯದವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ವಿದ್ಯಾವಂತರಾದರೆ ಸ್ವಾಭಿಮಾನ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ನನ್ನನ್ನು ನೋಡಿದಾಗ ಕೆಲವರು ಸಿದ್ದರಾಮಯ್ಯಗೆ ದುರಹಂಕಾರ ಎನ್ನುತ್ತಾರೆ. ಆದರೆ ನಾನು ಸ್ವಾಭಿಮಾನಿಯೇ ಹೊರತು ದುರಹಂಕಾರಿ ಅಲ್ಲ. ನನ್ನನ್ನ ದುರಹಂಕಾರಿ ಅಂದರೆ ಕೇರ್ ಮಾಡುವುದಿಲ್ಲ ಎಂದು ಹೇಳಿದರು. ಪ್ರಜಾಪ್ರಭುತ್ವದಲ್ಲಿ ಮಾತನಾಡುವ ಹಕ್ಕಿದೆ. ಅವರು ದುರಹಂಕಾರಿ ಅಂದರು ಐ ಡೋಂಟ್ ಕೇರ್. ನಿಮ್ಮನ್ನು ದುರಹಂಕಾರಿ ಅಂದರೂ ಸ್ವಾಭಿಮಾನಿಗಳಾಗಿ ಬದುಕಿ ಎಂದು ಸಲಹೆ ನೀಡಿದರು.
ಬಂಗಾರಪ್ಪ ಅವರನ್ನು ಆಹ್ವಾನಿಸಲು ಹೋದಾಗ 25 ಲಕ್ಷ ರೂ. ದುಡ್ಡು ಕೊಡಲು ಬಂದರು. ಆಗ ಕುರುಬರು ಅಷ್ಟು ಬಡವರಿಲ್ಲ ಅಂತ ವಾಪಸ್ ನೀಡಿದೆ. ಹರಿಕೋಡೆ ಅವರು ನಾನು ಊಟ ಹಾಕಿಸುತ್ತೇನೆ ಎಂದಿದ್ದರು. ಅವರಿಗೂ ಬೇಡ ಎಂದೆವು. 5-6 ಲಕ್ಷ ಜನ ಸೇರಿದ ಕಾರ್ಯಕ್ರಮದಲ್ಲಿ ಯಾರಿಗೆ ಮಠ ಇಲ್ವೋ ಅವರಿಗೆಲ್ಲ ಈ ಮಠ ಅಂತ ಘೋಷಣೆ ಮಾಡಿದೆವು ಎಂದು ಹಳೆಯ ನೆನಪು ಹಂಚಿಕೊಂಡರು.