ಬೆಂಗಳೂರು: ನನ್ನ ನೇತೃತ್ವದಲ್ಲಿ ಕೂಡ ಪೊಲೀಸ್ರು ಒಳ್ಳೆ ಕೆಲಸ ಮಾಡ್ತಾರೆ ಅನ್ನೋ ನಂಬಿಕೆ ಇದೆ ಎಂದು ನೂತನ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಪೊಲೀಸ್ ಅಧಿಕಾರಿಗಳು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡ್ತಿದ್ದಾರೆ. ದುರಂತದ ಕುರಿತು ಎಫ್ಐಆರ್ ದಾಖಲಾಗಿದ್ದು, ತನಿಖೆ ಕೂಡ ನಡೀತಿದೆ ಎಂದಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಘಟನೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ಸದ್ಯಕ್ಕೆ ಏನೂ ಹೇಳಲು ನನಗೆ ಆಗೋದಿಲ್ಲ. ಪ್ರಕರಣವನ್ನ ಸಿಐಡಿ ಕೊಡುವ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಸದ್ಯಕ್ಕೆ ನಾವೇ ತನಿಖೆ ಮಾಡ್ತಿದ್ದೇವೆ, ಸ್ಪೆಷಲ್ ಟೀಂ ಕಾರ್ಯಾಚರಣೆ ನಡೆಸ್ತಿದೆ ಎಂದು ಹೇಳಿದ್ದಾರೆ.