ಧಾರವಾಡ: ‘ಕೋರ್ಟ್ ಆದೇಶಕ್ಕೆ ತಲೆಬಾಗುತ್ತೇನೆ. ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಕೋರ್ಟ್ಗೆ ಶರಣಾಗುತ್ತೇನೆ’ ಎಂದು ಶಾಸಕ ವಿನಯ ಕುಲಕರ್ಣಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನನ್ನ ವಿರುದ್ದ ಹುನ್ನಾರ ನಡೆದಿದೆ. ನಾನೀಗ ಅಸಹಾಯಕ ಸ್ಥಿತಿಯಲ್ಲಿದ್ದೇನೆ. ಸತ್ಯಕ್ಕೆ ಜಯ ಸಿಗುವ ನಂಬಿಕೆ ಇದೆ’ ಎಂದರು.
ಕ್ಷೇತ್ರದಲ್ಲಿ ನಾನು ಇಲ್ಲದಿದ್ದರೂ ಪತ್ನಿ, ಪುತ್ರಿ, ಪಕ್ಷದ ಮುಖಂಡರು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾರೆ. ಅಧಿಕಾರಿಗಳ ಸಭೆ ನಡೆಸಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚನೆ ನೀಡಿದ್ದೇನೆ’ ಎಂದರು.
ಜಸ್ಟ್ ಈ ಎಲೆ ಜಗಿದು ರಸ ಸೇವಿಸಿದ್ರೆ ಸಾಕು ಕೊಲೆಸ್ಟ್ರಾಲ್ ಕರಗಿ ಹೋಗುತ್ತೆ!
ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಗೌಡರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ ಕುಲಕರ್ಣಿ ಅವರಿಗೆ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಜೂನ್ 6ರಂದು ರದ್ದುಪಡಿಸಿತ್ತು. ವಾರದೊಳಗೆ ವಿಚಾರಣಾ ಕೋರ್ಟ್ ಮುಂದೆ ಶರಣಾಗುವಂತೆ ಆದೇಶಿಸಿತ್ತು.