ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ ನೇತೃತ್ವದಲ್ಲಿ ಜನತಾದರ್ಶನ ನಡೆಯಿತು. ಈ ವೇಳೆ ಕೆಎಸ್ ಆರ್‌ಟಿಸಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸನೇ ಬೇಕು ಎಂದು ವ್ಯಕ್ತಿಯೋರ್ವ ಪಟ್ಟು ಹಿಡಿದಿದ್ದು, ಸಚಿವರು ಗರಂ ಆದ ಘಟನೆಯೂ ನಡೆಯಿತು.
ಕೆಎಸ್‌ಆರ್‌ಟಿಸಿಯಲ್ಲಿ ಆತನಿಗೆ ಕಂಡಕ್ಟರ್ ಹುದ್ದೆ ಸಿಕ್ಕಿದೆ. ಆದರೆ ಆತ ಸಚಿವ ಸಂತೋಷ್ ಲಾಡ್ ಮುಂದೆ ನನಗೆ ಸೆಕ್ಯುರಿಟಿ ಕೆಲಸನೇ ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಆಗ ಸಚಿವ ಸಂತೋಷ್ ಲಾಡ್ ಕೈಯಿಗೆ ಬಂದಿರೋ ಸರಕಾರಿ ಕೆಲಸ ಕಳಕೋಬೇಡ ಎಂದು ಬುದ್ದಿ ಮಾತು ಹೇಳಿದರು. ಆರೂ ಸಹ ಕಂಡಕ್ಟರ್ ಆಗೋದು ಬೇಡ, ನಾವು ವಾಚಮನ್ ಆಗಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಇದರಿಂದ ಕೋಪಗೊಂಡ ಸಚಿವರು ಕಂಡಕ್ಟರ್ ಆದ್ರೆ ಇವನ ಮರಿಯಾದೆ ಹೋಗುತ್ತೆ. ನಿನಗೆ ವಾಚಮನ್ ಕೆಲಸ ಬೇಕೆಂದ್ರೆ 6 ವರ್ಷ ವೇಯ್ಟ್ ಮಾಡು . ವಾಚಮನ್ ಕೆಲಸ ಸಿಕ್ಕಾಗ ವಾಚಮನ ಕೆಲಸ ಮಾಡು ಎಂದು ಗರಂ ಆಗಿ ಉತ್ತರ ಕೊಟ್ಟರು.