ರಾಮನಗರ: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರನ್ನು ಕರ್ನಾಟಕ ಸರ್ಕಾರ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಆಯ್ಕೆ ಮಾಡಿದ್ದಾರೆ. ಇನ್ನು, ತಮನ್ನಾ ಆಯ್ಕೆಗೆ ಕನ್ನಡಿಗರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕನ್ನಡ ಕಲಾವಿದರನ್ನ ಕಡೆಗಣಿಸಿ ಪರಭಾಷಿಕರಿಗೇಕೆ ಮಣೆ ಎಂಬ ಟೀಕೆ ವ್ಯಕ್ತವಾಗಿದೆ.
ಇನ್ನೂ ಈ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯೇ ನೀಡಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ಯಾವ ತಮ್ಮನ್ನಾನೂ ಬೇಡ, ಸುಮನ್ನಾನೂ ಬೇಡ. ಮೈಸೂರು ಸ್ಯಾಂಡಲ್ ಸೋಪ್ ಎನ್ನುವುದೇ ಒಂದು ಬ್ರ್ಯಾಂಡ್ ಆಗಿದೆ ಅಂತ ಹೇಳಿದ್ದಾರೆ.
ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ
ಮೈಸೂರು ಸ್ಯಾಂಡಲ್ ಸೋಪ್‌ಗೆ ಕನ್ನಡ – ತಮಿಳಿನ ರಾಯಭಾರಿ ಬೇಕಿಲ್ಲ ಅಂತ ವಾಟಾಳ್ ನಾಗರಾಜ್ ಹೇಳಿದ್ದಾರೆ. ಬೇಕಿದ್ದರೆ ಅದಕ್ಕೆ ನಾನೇ ಉಚಿತ ರಾಯಭಾರಿ ಆಗ್ತೇನೆ ಅಂತ ವಾಟಾಳ್ ಹೇಳಿದ್ದಾರೆ. ಎಲ್ಲರೂ ನಮ್ಮ ಸ್ಯಾಂಡಲ್ ಸೋಪ್ ಬಳಸಲಿ ಅಂತ ಅವರು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ.