ನಾಟಿ ಗ್ಯಾಂಗ್’ ಸಿನಿಮಾದಿಂದ ಬಣ್ಣದ ಬದಕು ಆರಂಭಿಸಿದ ಸೋನಿಯಾ ಬನ್ಸಲ್ ಅವರು ಚಿತ್ರರಂಗ ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ಆಘಾತಕಾರಿ ನಿರ್ಧಾರದ ಬಗ್ಗೆ ಮಾತನಾಡಿ ಸೋನಿಯಾ ಕೆಲಸ ಮತ್ತು ಹಣ ಇದ್ದರೂ, ತನ್ನ ಜೀವನದಲ್ಲಿ ಶಾಂತಿಯ ಕೊರತೆ ಇತ್ತು. ಈಗ ನಾನು ಜೀವನ ತರಬೇತುದಾರಳಾಗಲು ಮತ್ತು ಜನರಿಗೆ ಮಾರ್ಗದರ್ಶನ ನೀಡಲು ಬಯಸುತ್ತೇನೆ ಎಂದಿದ್ದಾರೆ. ನಾವು ಬಹುಶಃ ಇತರರಿಗಾಗಿಯೇ ಎಲ್ಲವನ್ನೂ ಮಾಡುತ್ತೇವೆ, ಆದರೆ ಅದರಲ್ಲಿ ನಮ್ಮನ್ನು ನಾವು ಮರೆತು ಬಿಡುತ್ತೇವೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ನಾನು ನನ್ನ ನಿಜವಾದ ಉದ್ದೇಶವೇನು ಎಂಬುದನ್ನು ಅರಿಯದಂತೆ ಆಗಿದೆ. ಹೆಚ್ಚು ಸಂಪಾದನೆ, ಯಶಸ್ಸು, ಖ್ಯಾತಿಯ ಹಿಂದೆ ಓಡುತ್ತಾ ನಾನು ನನ್ನನ್ನು ಕಳೆದುಕೊಂಡೆ. ನನ್ನ ಬಳಿ ಹಣವಿತ್ತು, ಜನಪ್ರಿಯತೆಯೂ ಇತ್ತು. ಆದರೆ ಶಾಂತಿಯಂತಹ ಅತೀ ಮುಖ್ಯವಾದ ಅಂಶವಿತ್ತು ಎಂಬ ಭರವಸೆಯೇ ಇರಲಿಲ್ಲ. ನೀವು ಶಾಂತಿಯಿಂದ ಇರದಿದ್ದರೆ, ಬಾಕಿ ಎಲ್ಲ ಇದ್ದರೂ ಏನು ಉಪಯೋಗ? ಬಾಹ್ಯವಾಗಿ ಎಲ್ಲವೂ ಇದ್ದರೂ, ಒಳಗಿನಿಂದ ಖಾಲಿಯಾಗಿ ಹೋದರೆ ಅದು ತುಂಬಾ ಕತ್ತಲೆಯ ಅನುಭವ.
ಸೋನಿಯಾ ಬನ್ಸಾಲ್ ಅವರು ತಮ್ಮ ವೃತ್ತಿಜೀವನವನ್ನು ಬಿಟ್ಟು ಆಧ್ಯಾತ್ಮಿಕ ಪಥವನ್ನು ಅನುಸರಿಸಲು ನಿರ್ಧರಿಸಿದ್ದು, ಇದು ಅವರ ವ್ಯಕ್ತಿತ್ವದಲ್ಲಿ ಮತ್ತು ಆದ್ಯತೆಗಳಲ್ಲಿ ಮಹತ್ವಪೂರ್ಣ ಬದಲಾವಣೆಯನ್ನು ಸೂಚಿಸುತ್ತದೆ ಇದು ಅನೇಕರನ್ನು ಪ್ರೇರೇಪಿಸಿದೆ. ಈ ಮನರಂಜನಾ ಕ್ಷೇತ್ರವು ನನಗೆ ಗುರುತನ್ನು ನೀಡಿತ್ತಾದರೂ, ಅದು ನನಗೆ ಸ್ಥಿರತೆ ಅಥವಾ ಒಳಗಿನ ಸಂತೋಷವನ್ನು ನೀಡಲಿಲ್ಲ. ನಾನು ಇನ್ನು ಮುಂದೆ ನಟನೆಯತ್ತ ಬಯಸುವುದಿಲ್ಲ. ಈಗ ನಾನು ಜೀವನ ತರಬೇತುದಾರ ಆಗಿ ಕೆಲಸಮಾಡಲು ಮತ್ತು ಆಧ್ಯಾತ್ಮಿಕ ಚಿಕಿತ್ಸೆ ನೀಡಲು ಬಯಸುತ್ತೇನೆ.” ಎಂದಿದ್ದಾರೆ.