ಚಿಕ್ಕಬಳ್ಳಾಪುರ : ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಈ ಮೂಲಕ ಸೆಪ್ಟೆಂಬರ್ ಕ್ರಾಂತಿ, ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಹೇಳಿಕೆ ನೀಡಿದ್ದ ಡಿಕೆ ಬಣಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸಚಿವ ಸಂಪುಟ ಸಭೆಗೆ ಆಗಮಿಸಿರುವ ಸಿದ್ದರಾಮಯ್ಯ ನಂದಿಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಐದು ವರ್ಷಗಳ ಕಾಲ ನಮ್ಮದೇ ಸರ್ಕಾರ ಇದ್ದೇ ಇರುತ್ತೆ. ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಬಿಜೆಪಿಯವರು ಸುಳ್ಳು ಹೇಳೋದರಲ್ಲಿ ನಿಸ್ಸೀಮರು, ಅವರಿಗೆ ನಿಜ ಹೇಳೋದು ಗೊತ್ತೇ ಇಲ್ಲ. ಹಗಲು ಕನಸು ಕಾಣುತ್ತಿದ್ದಾರೆ. ವಿಜಯೇಂದ್ರ ಅಶೋಕ್ ಬರೀ ಕನಸು ಕಾಣೋದೆ ಆಯ್ತು. ನಾವು ಒಟ್ಟಾಗಿದ್ದೇವೆ ಅಂತ ಮೈಸೂರಲ್ಲೂ ಹೇಳಿದೆ. ಇಲ್ಲೂ ಹೇಳ್ತಿದೀನಿ ನಾವು ಒಟ್ಟಿಗಿದ್ದೇವೆ. ಎಲ್ಲಾ ಶಾಸಕರು ಸಚಿವರಾಗೋ ಹಕ್ಕು ಇದೆ. ಈಗ 34 ಸಚಿವರನ್ನು ಮಾಡಲಾಗಿದೆ, ಉಳಿದ ಶಾಸಕರೂ ಸಚಿವರಾಗಲು ಅವಕಾಶ ಇದೆ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.