ಮೈಸೂರು: ರಾಮನಗರ ಹೆಸರು ಬದಲಾವಣೆಯನ್ನು ಮಾಡೇ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನನಗೆ ರಾಮನಗರದ ಹೆಸರನ್ನು ಹೇಗೆ ಬದಲಾವಣೆ ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಾನು ಮಾಡಿಯೇ ಸಿದ್ದ.
ಇದು ಬೆಂಗಳೂರು ದಕ್ಷಿಣವೇ. ನಾವು ಯಾರೂ ಸಹ ಹೊರಗಡೆಯಿಂದ ಬಂದು ಹೆಸರು ಕೊಡಿ ಎಂದು ಕೇಳುತ್ತಿಲ್ಲ. ಇದು ನಮ್ಮ ಹಕ್ಕು. ನಮ್ಮ ತಂದೆ ತಾಯಿ, ಹುಟ್ಟು ಹೆಸರನ್ನು ಬದಲಾವಣೆ ಮಾಡಿಕೊಳ್ಳಲು ಆಗುತ್ತದೆಯೇ? ಎಂದು ಹೇಳಿದರು.
Mango Benefits: ನಿಮಗೆ ಗೊತ್ತೆ..? ತೂಕ ಹೆಚ್ಚಾಗುವುದನ್ನು ತಡೆಯುತ್ತವಂತೆ ಮಾವಿನ ಹಣ್ಣು!
ಇನ್ನೂ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಭದ್ರತಾ ವೈಫಲ್ಯ ಕಾರಣನಾ ಎನ್ನುವ ವಿಚಾರಕ್ಕೆ ಕೇಂದ್ರ ಸರ್ಕಾರದ ಪರ ಡಿಸಿಎಂ ಡಿಕೆ ಶಿವಕುಮಾರ್ ಸಾಫ್ಟ್ ಕಾರ್ನರ್ ತೋರಿದ್ದಾರೆ. ನಾನು ಇಲ್ಲಿ ಬ್ಲೇಮ್ ಗೇಮ್ ಮಾಡುವುದಿಲ್ಲ, ಯಾರ ವಿರುದ್ದವೂ ಮಾತನಾಡುವುದಿಲ್ಲ.
ಪಕ್ಷದ ಅಧ್ಯಕ್ಷ ಹಾಗೂ ಡಿಸಿಎಂ ಆಗಿ ಹೇಳುತ್ತಿದ್ದೇನೆ, ಈ ವಿಚಾರದಲ್ಲಿ ರಾಜಕೀಯ ಯಾವುದೇ ಕಾರಣಕ್ಕೂ ಮಾಡಬಾರದು. ಹೊರದೇಶದಿಂದ ಬಂದು ಶಾಂತಿ ಕದಡುವ ಕೆಲಸ ಮಾಡಿದ್ದಾರೆ, ಅವರನ್ನು ಮುಗಿಸುವ ಕೆಲಸ ಆಗಬೇಕು. ಕೇಂದ್ರ ಸರ್ಕಾರ ಹೀಗಾಗಲೇ ಆ ಕೆಲಸ ಮಾಡಿದೆ. ಈ ವಿಚಾರವಾಗಿ ನಮ್ಮ ಸಂಪೂರ್ಣ ಸಹಕಾರ ಇರಲಿದೆ ಎಂದರು.