ಮೈಸೂರು: ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ನಮ್ಮದು ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಯಾಕೆ ಕೇಳುತ್ತೀರಾ ? ನೀವು ಮಾಡ್ತೀರಾ ಸಂಪುಟ ಪುನರ್ ರಚನೆ. ನಾನೇ ಮಾಡಬೇಕು, ಸಂಪುಟ ಪುನರ್ ರಚನೆ ಮಾಡುವಾಗ ನಿಮಗೆ ಹೇಳಿಯೇ ಪುನರ್ ರಚನೆ ಮಾಡುತ್ತೇನೆ.
ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ
ರಾಜ್ಯ ಸರ್ಕಾರದ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತೇವೆ. ಯುದ್ದದ ಕದನ ವಿರಾಮ ಘೋಷಣೆ ಆಗಿರುವ ಕಾರಣ ಈ ಕಾರ್ಯಕ್ರಮ ಮಾಡುತ್ತೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ನಮ್ಮದು ಮಾತ್ರ. ಇದೇ ನಮ್ಮ ಸರ್ಕಾರದ ಯಶಸ್ಸು ಎಂದರು.
ಇನ್ನೂ 1971 ರ ಯುದ್ಧಕ್ಕೂ ಇವತ್ತಿನ ಸಂದರ್ಭಕ್ಕೂ ನಾನು ಹೋಲಿಕೆ ಮಾಡಿ ಮಾತನಾಡುವುದಿಲ್ಲ. ಅವತ್ತಿನ ಪರಿಸ್ಥಿತಿಗಳೇ ಬೇರೆ, ಇವತ್ತಿನ ಪರಿಸ್ಥಿತಿಗಳೇ ಬೇರೆ. ಡೊನಾಲ್ಡ್ ಟ್ರಂಪ್ ಟ್ವೀಟ್ ಬಗ್ಗೆಯಾಗಲಿ, ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ ಬಗ್ಗೆಯಾಗಲಿ ನಾನು ಮಾತನಾಡುವುದಿಲ್ಲ. ನನ್ನ ಮಾತನ್ನು ಸೀಜ್ ಫೈರಿಂಗ್ ಗೆ ಅಷ್ಟೇ ಸಿಮಿತಗೊಳಿಸುತ್ತೇನೆ ಎಂದು ಹೇಳಿದರು.