ಮಂಗಳೂರು: ನನ್ನ ವಿರುದ್ಧ ಮಾತ ನಾಡುವವರ ವಿರುದ್ಧ ನಾನೇನೂ ಮಾತನಾಡಲ್ಲ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೊಲೆ ನಡೆದಾಗ ಉದ್ವಿಗ್ನ ಪರಿಸ್ಥಿತಿ ಇತ್ತು. ಆ ಸಮಯದಲ್ಲಿ ನನ್ನ ಆದ್ಯತೆಯೆಂದರೆ ನನ್ನ ಜಿಲ್ಲೆಯಲ್ಲಿ ಕೋಮು ಸಾಮರಸ್ಯವನ್ನು ಕಾಪಾಡುವುದು.
ಆದ್ದರಿಂದ, ನನಗೆ ಯಾವುದೇ ಮಾಹಿತಿ ಬಂದರೂ, ನಾನು ಅದನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದೇನೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಪೊಲೀಸರು ಕೆಲವರನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಕಠಿಣ ಶಿಕ್ಷೆ ಆಗುವ ನಿಟ್ಟಿನಲ್ಲಿ ತನಿಖೆ ಮಾಡಲಿ.
ಚಾಣಕ್ಯನ ಪ್ರಕಾರ ಈ ಕೆಲಸ ಮಾಡಿದ್ರೆ ಸಾಕು ಜೀವನದ ಪ್ರತಿ ಹೆಜ್ಜೆಯಲ್ಲೂ ಸಿಗುತ್ತೆ ಸಂತೋಷ-ಯಶಸ್ಸು..!
ರಾಜಕೀಯವಾಗಿ ಒಂದು ವಿಚಾರ ಸಿಕ್ಕರೆ ಸಾಕು ಮಾತನಾಡುತ್ತಾರೆ. ನನ್ನ ವಿರುದ್ಧ ಮಾತ ನಾಡುವವರ ವಿರುದ್ಧ ನಾನೇನೂ ಮಾತನಾಡಲ್ಲ. ದೇವರು ಹಾಗೂ ದೇವರಂತಹ ನನ್ನ ಕ್ಷೇತ್ರದ ಜನರು ಇರುವಾಗ ಇದ್ಯಾವುದರ ಬಗ್ಗೆಯೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.