ಉಡುಪಿ: ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಒಗ್ಗಟ್ಟಿನ ಬಗ್ಗೆ ನಾನು ಮಾತಾಡಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಡಿಕೆಶಿ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಒಗ್ಗಟ್ಟಿನ ಬಗ್ಗೆ ನಾನು ಮಾತಾಡಲ್ಲ. ಒಗ್ಗಟ್ಟಿಲ್ಲ ಅಂತ ಖರ್ಗೆಗೂ ಅನಿಸಿರಬೇಕು ಹಾಗಾಗಿ ಈ ಹೇಳಿಕೆ ಕೊಟ್ಟಿರಬಹುದು.
ಬಿಜೆಪಿ ಸರ್ಕಾರವನ್ನು ವಜಾ ಮಾಡಲು ಯತ್ನಿಸಿದ್ದು ಕಾಂಗ್ರೆಸ್. ಮೋದಿ ಆಡಳಿತದಲ್ಲಿ ಈ ಥರದ ದುಷ್ಕೃತ್ಯ ಎಲ್ಲೂ ಆಗಿಲ್ಲ. ಮೋದಿ ಅವಧಿಯಲ್ಲಿ ರಾಜ್ಯಪಾಲರ ಆಡಳಿತ ತಂದ ಒಂದೇ ಒಂದು ಉದಾಹರಣೆ ಇಲ್ಲ. ಖರ್ಗೆ ಬಹಳ ದೊಡ್ಡವರು ಇತಿಹಾಸ ಗೊತ್ತಿದ್ದವರು. ನಾವಾದ್ರೆ ವಜಾ ಮಾಡ್ತಿದ್ದೆವು, ಬಿಜೆಪಿಯವರು ಬಿಟ್ಟಿದ್ದಾರೆ ಎಂಬರ್ಥದಲ್ಲಿ ಹೇಳಿರಬಹುದು.
ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಪೊರಕೆಯನ್ನು ಇಡಬಾರದು..! ಏನಾಗುತ್ತೆ ಗೊತ್ತಾ..?
ಸರ್ಕಾರ ವಜಾ ಮಾಡುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ. ಆ ಮಾನಸಿಕತೆ ಬಿಜೆಪಿಗೆ ಇಲ್ಲ. ರಾಜ್ಯಪಾಲರಾಗಿದ್ದ ಹಂಸರಾಜ ಭಾರದ್ವಾಜ್ ಗೋಹತ್ಯೆ ನಿಷೇಧ ಕಾಯ್ದೆ ಬಿಲ್ಗೆ ಸಹಿ ಹಾಕಿಲ್ಲ. ಬಿಲ್ಲನ್ನು ರಾಷ್ಟ್ರಪತಿಗೆ ವರ್ಗಾವಣೆ ಮಾಡಿದ್ದರು. ರಿಸರ್ವೇಶನ್ ಬಿಲ್ಲನ್ನು ಗೆಹ್ಲೋಟ್ ರಾಷ್ಟ್ರಪತಿಗೆ ಕಳುಹಿಸಿದ್ದಾರೆ. ಅಂದು ಸ್ವಾಗತಿಸಿದ ನೀವು ಇಂದು ಈ ನಡೆಯನ್ನು ಸ್ವಾಗತಿಸಬೇಕಿತ್ತು ಎಂದು ಟಾಂಗ್ ಕೊಟ್ಟರು.