Close Menu
Ain Live News
    Facebook X (Twitter) Instagram YouTube
    Sunday, June 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನನ್ನ ಫ್ರೆಂಡ್‌ಶಿಪ್‌ ಅವನಿಗೆ ಬೇಡ ಅಂದ್ರೆ ನೇರವಾಗಿ ಹೇಳಲಿ: ವಿನಯ್- ರಜತ್ ಸ್ನೇಹದಲ್ಲಿ ಬಿರುಕು!?

    By AIN AuthorApril 12, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಇತ್ತೀಚೆಗಷ್ಟೆ ಮಚ್ಚು ಹಿಡಿದು ರೀಲ್ಸ್ ಮಾಡಿದ ಬೆನ್ನಲ್ಲೇ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ ಇದೇ ಘಟನೆಗೆ ಸಂಬಂಧಿಸಿದಂತೆ ರಜತ್ ಹಾಗೂ ವಿನಯ್ ಜೈಲಿಗೂ ಕೂಡ ಹೋಗಿ ಬಂದಿದ್ದರು. ಇದಾದ ಬಳಿಕ ಕುಚಿಕು ಗೆಳೆಯರಂತಿದ್ದ ಇವರ ಸ್ನೇಹಕ್ಕೆ ಬಿರುಕು ಮೂಡಿದ್ಯಾ?ಎಂಬ ಪ್ರಶ್ನೆ ಮೂಡಿದೆ.

    ಅಂತಹ ಪುಢಾರಿಗಳಿಗೆ ಹೆದರುವ ಮಗ ನಾನಲ್ಲ: ಕಾಂಗ್ರೆಸ್ ಗೆ ಹೆಚ್ ಡಿ ಕುಮಾರಸ್ವಾಮಿ ಟಾಂಗ್!

    ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ ಮಚ್ಚು ಹಿಡಿದು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ಪೋಸ್ಟ್ ಗಮನಿಸಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧನ ಕೂಡ ಮಾಡಿದ್ರು. ನಂತರ ಪರಪ್ಪನ ಅಗ್ರಹಾರ ಜೈಲಿಗೂ ಕಳುಹಿಸಲಾಗಿತ್ತು. ಆ ನಂತರ ವಿನಯ್ ವಿಡಿಯೋ ಮಾಡಿ ರೀಲ್ಸ್ ಮಾಡಿದ್ದು ತಪ್ಪು, ಇನ್ಮುಂದೆ ಜೀವನದಲ್ಲಿ ಯಾವತ್ತೂ ರೀಲ್ಸ್ ಮಾಡಲ್ಲ ಅಂತಾ ಹೇಳಿಕೆ ಕೂಡ ಕೊಟ್ಟಿದ್ರು. ಆದ್ರೆ ಇಲ್ಲಿವರೆಗೂ ರಜತ್ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

    ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಜತ್, ಅಕ್ಷಯ್ ಸ್ಟುಡಿಯೋದಲ್ಲಿ ಖಾಸಗಿ ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿಸಿ ಹೊರಗೆ ಬಂದ ವೇಳೆ ನಾನೇ ರೀಲ್ಸ್ ಮಾಡೋಣ ಅಂತ ವಿನಯ್‌ಗೆ ಹೇಳಿದ್ದೆ. ಅಲ್ಲೇ ಸೆಟ್‌ನಲ್ಲಿದ್ದ ಫೈಬರ್ ಮಚ್ಚು ತಗೊಂಡು ರೀಲ್ಸ್ ಮಾಡಿ ಇಬ್ಬರು ಇನ್‌ಸ್ಟಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ವಿ. ನಾವು ಫೈಬರ್ ಮಚ್ಚು ಬಳಸಿ ರೀಲ್ಸ್ ಮಾಡಿದ್ದು, ಆಸಲಿ ಮಚ್ಚು‌ ಬಳಸಿಲ್ಲ. ಮಚ್ಚು ಹಿಡಿದು ರೀಲ್ಸ್ ಮಾಡೋದು ತಪ್ಪು ಅಂತ ಗೊತ್ತಿರಲಿಲ್ಲ, ಯಾರು ಕೂಡ ಮುಂದೆ ಈ ರೀತಿ ಮಾಡಬೇಡಿ ಅಂತ ಮನವಿ ಕೂಡ ಮಾಡಿದ್ದಾರೆ.

    ಮುಂದುವರಿದು ಮಾತನಾಡಿದ ರಜತ್, ಕಳೆದ 11 ವರ್ಷಗಳಿಂದ ನಾನು ವಿನಯ್, ಸ್ನೇಹಿತರು. ಬಿಗ್ ಬಾಸ್‌ಗೆ ಹೋಗೋಕು ಮುಂಚೆ ಪರಿಚಯ ಇತ್ತು. ಆದರೆ ರೀಲ್ಸ್ ಮಾಡಿ ಜೈಲಿಗೆ ಹೋಗಿ ಬಂದ ನಂತರ ಅವ‌ನೇ ಮಾಧ್ಯಮಗಳಿಗೆ ಮಾತಾಡೋದು ಬೇಡ ಅಂದ. ನಂತರ ಅವನೇ ಮೊದಲು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾನೆ. ಆಮೇಲೆ ನನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ತರ ನಡ್ಕೋತಿದ್ದಾನೆ. ಕಳೆದ ಒಂದು ವಾರದಿಂದ ಅವನ ಅಕೌಂಟ್‌ನಲ್ಲಿ ಕೆಲವರು ರಜತ್ ಫ್ರೆಂಡ್‌ಶಿಪ್‌ ಕಟ್ ಮಾಡು ಅಂತಾ ವಿನಯ್‌ಗೆ ಕಾಮೆಂಟ್ ಮಾಡ್ತಿದ್ದಾರೆ. ಆ ಕಾಮೆಂಟ್‌ಗಳಿಗೆ ವಿನಯ್ ಕೂಡ ಲೈಕ್ಸ್ ಕೊಡ್ತಿದ್ದಾನೆ. ಇದು ಸರಿಯಿಲ್ಲ, ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ. ಅದು ಬಿಟ್ಟು ಈ ರೀತಿ ಮಾಡೋದು ಸರಿಯಿಲ್ಲ ಅಂತ ವಿನಯ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

    Demo
    Share. Facebook Twitter LinkedIn Email WhatsApp

    Related Posts

    ಮುಖ್ಯಮಂತ್ರಿ ಆಸೆ ಇಟ್ಟುಕೊಂಡವರು ಸಿಎಂ ಬದಲಾವಣೆಯ ಊಹಾಪೋಹ ಹಬ್ಬಿಸುತ್ತಿದ್ದಾರೆ: ಯತೀಂದ್ರ!

    June 28, 2025

    Ileana D’Cruz: ಎರಡನೇ ಬಾರಿಗೆ ತಾಯಿಯಾದ ಇಲಿಯಾನಾ! ಮಗುವಿನ ಹೆಸರೇನು ಗೊತ್ತಾ..?

    June 28, 2025

    Power Cut: ನಾಳೆ ಬೆಂಗಳೂರಿನ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾದಲ್ಲಿ ಕರೆಂಟ್ ಇರುತ್ತಾ ನೋಡಿ?

    June 28, 2025

    ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ, ಜನರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ: ಸಿಎಂ ಸೂಚನೆ

    June 28, 2025

    ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಮಹೋತ್ಸವ ಪೂರ್ವಭಾವಿ ಸಭೆ.!

    June 28, 2025

    ಮಾಜಿ ಮೇಯರ್ ಹತ್ಯೆ ಪ್ರಕರಣ: ಮೋಸ್ಟ್ ವಾಂಟೆಡ್ ರೌಡಿಶೀಟರ್ ರಿಲೀಸ್!

    June 28, 2025

    ಕೋಡಿಮಠದ ಸ್ವಾಮೀಜಿ ಬಳಿ ಚಿನ್ನಾಭರಣ ಕಳವು: 7 ವರ್ಷಗಳ ಬಳಿಕ ಆರೋಪಿ ಅರೆಸ್ಟ್..!

    June 28, 2025

    ಬಂಗಾರ ಖರೀದಿಗೆ ಇದೇ ಬೆಸ್ಟ್ ಟೈಂ: ಇದ್ದಕ್ಕಿದ್ದಂತೆ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಹೀಗಿದೆ ದರ ವಿವರ

    June 28, 2025

    ಹುಡುಗರು ಸಿನಿಮಾದಲ್ಲಿ ‘ಪಂಕಜಾ’ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಹೃದಯಾಘಾತದಿಂದ ನಿಧನ..!

    June 28, 2025

    ಸಿಲಿಕಾನ್ ಸಿಟಿ ಹೊರಭಾಗದಲ್ಲಿ ಸರಗಳ್ಳರ ಹಾವಳಿ‌: ಒಂದೇ ದಿನ 5 ಕಡೆ ಕೃತ್ಯ!

    June 28, 2025

    ಸಿಲಿಕಾನ್ ಸಿಟಿಯಲ್ಲೊಂದು ಅಮಾನಿಯ ಘಟನೆ: ಪ್ರಾಣಿ ಪ್ರಿಯರು ನೋಡಲೇ ಬೇಕಾದ ಸ್ಟೋರಿ!

    June 28, 2025

    ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಮಳೆ ಆರ್ಭಟ: ಎಲ್ಲೆಲ್ಲಿ?

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.