ಮೈಸೂರು: ಈ ಸಲ ಕಪ್ ನಮ್ದೇ, ಪ್ರತಿ ಬಾರಿಯ ಐಪಿಎಲ್ ಶುರುವಾದಾಗ್ಲೂ, ಆರ್ಸಿಬಿ ಅಭಿಮಾನಿಗಳು ಸ್ಲೋಗನ್ ಶುರು ಮಾಡ್ತಾರೆ. ಜೈಕಾರ ಹಾಕಿ, ಹಾಡು ಹಾಡಿ, ಡ್ಯಾನ್ಸ್ ಮಾಡಿ ತಂಡಕ್ಕೆ ಜೋಶ್ ತುಂಬ್ತಾರೆ. ಆದ್ರೆ, ಸೀಸನ್ ಕೊನೆಯಲ್ಲಿ ಸೋತು ನಿರಾಸೆ ಮೂಡಿಸುತ್ತೆ. ಆದ್ರೀಗ ಸೀಸನ್-18ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಸೀಬು ಬದಲಾಗುವ ಭರವಸೆ ಹುಟ್ಟಿಹಾಕಿದೆ.
ನಿಮಗೆ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಲಿವರ್ ಕ್ಯಾನ್ಸರ್ ಬಂದಿದೆ ಎಂದರ್ಥ… ಕೂಡಲೇ ಡಾಕ್ಟರ್ ಭೇಟಿ ಮಾಡಿ!
ಸೀಸನ್-18ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮೊದಲ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ಗೆ ಪಂಚ್ ನೀಡಿ ಫೈನಲ್ಗೆ ಲಗ್ಗೆ ಇಟ್ಟಿದೆ. ಅಷ್ಟೇ ಅಲ್ಲ, ಮೊದಲ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಡುವ ನಿರೀಕ್ಷೆ ಹೆಚ್ಚಿಸಿದೆ.
ಆದ್ದರಿಂದ ನಾಳೆ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯದಲ್ಲಿ ಆರ್ಸಿಬಿ ಗೆದ್ದರೆ ಮೈಸೂರಿನ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಹೋಳಿಗೆ ಊಟ ಹಾಕಲಿದ್ದಾರೆ. ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ಉಚಿತವಾಗಿ ಹೋಳಿಗೆ ಊಟ ಹಂಚಿಕೆ ಮಾಡಲಾಗಿದೆ.
ನಾಳೆ ಮೈಸೂರಿನ 16 ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ನೀಡಲಾಗುತ್ತದೆ. ಇತ್ತ ಸಿಎಂ ಸಿದ್ದರಾಮಯ್ಯ ಬಳಿ ಮೈಸೂರಿನ ಆರ್ಸಿಬಿ ಅಭಿಮಾನಿ ಬಸವರಾಜ ಬಸಪ್ಪ ಮನವಿ ಮಾಡಿದ್ದಾರೆ. ಆರ್ ಸಿಬಿ ಗೆದ್ದರೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲೂ ಉಚಿತ ಹೋಳಿಗೆ ಊಟ ಹಾಕಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.