ವಿಜಯಪುರ:- ಕೋಲಾರ ಹೊಸ ತಾಲೂಕು ಹಾಗೂ ಬ್ರಿಡ್ಜ್ ನಿರ್ಮಾಣ ಮಾಡಿದ್ದು ನಾವು ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಸವನ ಬಾಗೇವಾಡಿ ಕ್ಷೇತ್ರದ ಮಾಜಿ ಬಿಜೆಪಿ ಸಚಿವ ಎಸ್ ಕೆ ಬೆಳ್ಳುಬ್ಬಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಜನಗಣತಿಯ ಜೊತೆಗೆ ದೇಶಾದ್ಯಂತ ಜಾತಿಗಣತಿ: ಇದು ಕೇಂದ್ರದ ಐತಿಹಾಸಿಕ ತೀರ್ಮಾನ ಎಂದ ಮಾಜಿ ಸಚಿವ ಎಚ್ ಆಂಜನೇಯ !
ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾಮಗಾರಿಗಳನ್ನ ತಮ್ಮದೆಂದು ಹೇಳಿಕೊಳ್ತಿದ್ದಾರೆಂದು ಗರಂ ಆಗಿದ್ದಾರೆ. ಕೋರ್ತಿ-ಕೊಲ್ಹಾರ ಬ್ರಿಡ್ಜ್ ನಿರ್ಮಾಣ ಮಾಡಿದ್ದು ನಾನು. ಆದ್ರೆ ಸಚಿವ ಶಿವಾನಂದ ಪಾಟೀಲ್ ಕ್ರೆಡಿಟ್ ಪಡೆಯಲು ಯತ್ನ ಎಂದು ಬೆಳ್ಳುಬ್ಬಿ ಆರೋಪಿಸಿದ್ದಾರೆ. ನೀನು ವೇದಿಕೆಗೆ ಬಾ.. ನಾನು ಬರ್ತಿನಿ.. ನೀನೆ ಸಮಯ ಪಿಕ್ಸ್ ಮಾಡು. ವೇದಿಕೆ ಮೇಲೆ ನೀನೆ ಬ್ರಿಡ್ಜ್ ನಿರ್ಮಾಣ ಮಾಡಿದ್ದಾಗಿ ಸಾಬೀತು ಮಾಡು. ಸಾಬೀತಾದ್ರೆ ಎಲ್ಲರ ಎದುರು ಗನ್ ನಿಂದ ಹಣೆಗೆ ಹೊಡೆದುಕೊಂಡು ಸಾಯ್ತೀನಿ ಎಂದು ಬೆಳ್ಳುಬ್ಬಿ ನೇರ ಸವಾಲ್ ಹಾಕಿದ್ದಾರೆ.
ಒಂದು ನೀನು ಸುಳ್ಳು ಹೇಳ್ತಿದ್ದಿ ಎನ್ನೋದೊ ಸಾಬೀತಾದ್ರೆ ನೀನು ಗುಂಡು ಹೊಡೆದುಕೊ ಎಂದು ಸವಾಲ್ ಹಾಕಿದ್ದಾರೆ. ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಬಹುತೇಕ ಅಭಿವೃದ್ಧಿ ಕಾರ್ಯ ನಾನೇ ಮಾಡಿದ್ದು ಎಂದು ಬೆಳ್ಳುಬ್ಬಿ ಹೇಳಿದ್ದಾರೆ.