ಬೆಂಗಳೂರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2025 ರ ಏಪ್ರಿಲ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಂತೆ ದೇಶದ ವಿವಿಧ ಬ್ಯಾಂಕ್ಗಳಿಗೆ 15ನಗಳ ಕಾಲ ರಜೆ ಇದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ರಜಾದಿನಗಳು ಮತ್ತು ಕೆಲವು ಪ್ರಾದೇಶಿಕ ರಜಾದಿನಗಳು ಸೇರಿವೆ. ಆದ್ದರಿಂದ, ಗ್ರಾಹಕರು ಈ ರಜಾದಿನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
Happy Ramadan Eid 2025: ರಂಜಾನ್ ಹಬ್ಬದ ಮಹತ್ವ, ಇತಿಹಾಸ ಆಚರಣೆಯ ವಿಧಾನ ಹೀಗಿದೆ ನೋಡಿ..!
ಮತ್ತು ಅವರ ಅಗತ್ಯಗಳಿಗೆ ಅನುಗುಣವಾಗಿ ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ನಡೆಸಲು ಯೋಜಿಸಬೇಕು. ಮಹಾವೀರ ಜಯಂತಿ, ಬಸವಜಯಂತಿ, ಗುಡ್ ಫ್ರೈಡೆ ಇತ್ಯಾದಿ ದಿನಗಳು ಏಪ್ರಿಲ್ನಲ್ಲಿ ಇದ್ದು, ಹೆಚ್ಚಿನ ರಾಜ್ಯಗಳಲ್ಲಿ ರಜೆ ಇರುತ್ತದೆ. ಕೆಲ ರಜೆಗಳು ಕೆಲ ಪ್ರದೇಶದ ಬ್ಯಾಂಕುಗಳಿಗೆ ಮಾತ್ರ ಸೀಮಿತವಾಗಿರುತ್ತವೆ.
2025ರ ಏಪ್ರಿಲ್ನಲ್ಲಿ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಇರುವ ರಜಾ ದಿನಗಳು
- ಏಪ್ರಿಲ್ 1, ಮಂಗಳವಾರ: ಸರಹುಲ್ ಹಬ್ಬ (ಜಾರ್ಖಂಡ್ನಲ್ಲಿ ರಜೆ)
- ಏಪ್ರಿಲ್ 5, ಶನಿವಾರ: ಬಾಬು ಜಗಜೀವನ್ ರಾಮ್ ಜಯಂತಿ (ತೆಲಂಗಾಣದಲ್ಲಿ ರಜೆ)
- ಏಪ್ರಿಲ್ 6: ಭಾನುವಾರದ ರಜೆ
- ಏಪ್ರಿಲ್ 10, ಗುರುವಾರ: ಮಹಾವೀರ್ ಜಯಂತಿ (ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಜೆ)
- ಏಪ್ರಿಲ್ 12: ಎರಡನೇ ಶನಿವಾರದ ರಜೆ
- ಏಪ್ರಿಲ್ 13: ಭಾನುವಾರದ ರಜೆ
- ಏಪ್ರಿಲ್ 14, ಸೋಮವಾರ: ಅಂಬೇಡ್ಕರ್ ಜಯಂತಿ, ವಿಷು, ಬಿಹು, ತಮಿಳು ಹೊಸ ವರ್ಷ (ಕರ್ನಾಟಕ, ತಮಿಳುನಾಡು ಸೇರಿದಂತೆ ಹೆಚ್ಚಿನ ರಾಜ್ಯಗಳಲ್ಲಿ ರಜೆ)
- ಏಪ್ರಿಲ್ 15, ಮಂಗಳವಾರ: ಬಂಗಾಳ ಹೊಸ ವರ್ಷ, ಹಿಮಾಚಲ ದಿನ, ಬೋಹಾಗ್ ಬಿಹು (ಅಸ್ಸಾಂ, ಪಶ್ಚಿಮ ಬಂಗಾಳ, ಅರುಣಾಚಲಪ್ರದೇಶ, ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ರಜೆ)
- ಏಪ್ರಿಲ್ 18, ಶುಕ್ರವಾರ: ಗೂಡ್ ಫ್ರೈಡೆ (ಹೆಚ್ಚಿನ ರಾಜ್ಯಗಳಲ್ಲಿ ರಜೆ)
- ಏಪ್ರಿಲ್ 20: ಭಾನುವಾರದ ರಜೆ
- ಏಪ್ರಿಲ್ 21, ಸೋಮವಾರ: ಗರಿಯಾ ಪೂಜೆ (ತ್ರಿಪುರಾದಲ್ಲಿ ರಜೆ)
- ಏಪ್ರಿಲ್ 26: ನಾಲ್ಕನೇ ಶನಿವಾರದ ರಜೆ
- ಏಪ್ರಿಲ್ 27: ಭಾನುವಾರದ ರಜೆ
- ಏಪ್ರಿಲ್ 29, ಮಂಗಳವಾರ: ಭಗವಾನ್ ಶ್ರೀ ಪರಷುರಾಮ್ ಜಯಂತಿ (ಹಿಮಾಚಲ ಪ್ರದೇಶದಲ್ಲಿ ರಜೆ)
- ಏಪ್ರಿಲ್ 30, ಬುಧವಾರ: ಬಸವಜಯಂತಿ (ಕರ್ನಾಟಕ ರಾಜ್ಯದಲ್ಲಿ ರಜೆ)