ವಿಜಯಪುರ : ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಪ್ರಕರಣ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬ್ರಾಹ್ಮಣ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬ್ರಾಹ್ಮಣ ಸಮಾಜದ ಹೋರಾಟಕ್ಕೆ ಮರಾಠ, ದಲಿತ, ರಜಪೂತ, ಭಾವಸಾರ ಕ್ಷತ್ರೀಯ, ವಿಶ್ವ ಹಿಂದೂ ಪರಿಷತ್, ಶ್ರೀರಾಮ ನವಮಿ ಉತ್ಸವ ಸಮಿತಿ ಸೇರಿ ಹಿಂದೂ ಸಂಘಟನೆಗಳ ಬೆಂಬಲ ನೀಡಿವೆ.
ಪ್ರತಿಭಟನೆ ವೇಳೆ ಶ್ರೀ ರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ್ ವಂದಾಲ ಮಾತನಾಡಿ, ಸನಾತನ ಧರ್ಮಕ್ಕೆ ಕೈಹಾಕಿದರೆ ಕೈ ಕತ್ತರಿಸೋದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಹಣೆಗೆ ವಿಭೂತಿ, ಕುಂಕುಮ ಹಾಗು ಬಳೆ ಹಾಕಬೇಡಿ ಅಂತಾರೆ. ಸನಾತನ ಧರ್ಮಕ್ಕೆ ಕೈ ಹಾಕಿದ್ರೆ ಕೈ ಕತ್ತರಿಸುವ ಕೆಲಸ ನಾವು ಮಾಡುತ್ತೇವೆ. ಯಾವುದೇ ಧರ್ಮದ ಭಾವನೆಗಳ ಆಚರಣೆಗೆ ಕೈ ಹಾಕುವ ಕೆಲಸ ಮಾಡಿದ್ರೆ, ಅದರ ಹಿಂದೆ ಸರ್ಕಾರ ಇತ್ತಂದ್ರೆ ಆ ಸರ್ಕಾರ ಕಿತ್ತು ಹಾಕುವ ಕೆಲಸ ಮಾಡುತ್ತೀವಿ ಎಂದರು.
ಜನಿವಾರ ಜಟಾಪಟಿ ; ಸಿಇಟಿ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಭೇಟಿಯಾದ ಸಚಿವ ಈಶ್ವರ್ ಖಂಡ್ರೆ
ಪ್ರತಿಭಟನೆ ವೇಳೆ ದಲಿತ ಮುಖಂಡ ಸೇರಿದಂತೆ ಹಲವರು ಜನಿವಾರ ತೆಗೆಸಿದ್ದಕ್ಕೆ ಖಂಡಿಸಿದ ಪ್ರತಿಭಟನಾಕಾರರು, ಜನಿವಾರ ತೆಗೆಸಿದ ಅಧಿಕಾರಿ, ಸಿಬ್ಬಂದಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಆತನಿಗೆ ಇಂಜಿನಿಯರಿಂಗ್ ಸೀಟು ನೀಡಿದರೆ ಸಾಲದು. ಹೆಚ್ಚಿನ ಕೋರ್ಸ್ ಗೆ ಆಯ್ಕೆ ಆಗುವ ಅರ್ಹತೆ ಇದ್ದವರಿಗೆ ಇಂಜಿನಿಯರಿಂಗ್ ಸೀಟು ಕೊಟ್ಟರೆ ಉಪಯೋಗಕ್ಕೆ ಬಾರದು ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.