ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಒಡೆತನದ ಓಬಳಾಪೂರಂ ಮೈನಿಂಗ್ ಕಂಪನಿ(ಓಎAಸಿ) ಆಂಧ್ರ-ಕರ್ನಾಟಕ ಗಡಿ ಒತ್ತುವರಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬAಧಿಸಿದ ವಿಚಾರಣೆ ಪೂರ್ಣಗೊಳಿಸಿರುವ ಆಂಧ್ರದ ಸಿಬಿಐ ವಿಶೇಷ ಕೋರ್ಟ್ ಮೇ.೬ರಂದು ತೀರ್ಪು ಕಾಯ್ದಿರಿಸಿದ್ದು, ಪ್ರಕರಣದ ಆರೋಪ ಹೊತ್ತ ಜನಾರ್ದನರೆಡ್ಡಿ ಸೇರಿ ನಿವೃತ್ತ ಐಎಎಸ್, ಐಎಫ್ಎಸ್ ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.
ಆಂಧ್ರಪ್ರದೇಶದಲ್ಲಿ ವೈಎಸ್ ರಾಜಶೇಖರರೆಡ್ಡಿ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಆಡಳಿತದಲ್ಲಿದ್ದಾಗ ಎರಡು ರಾಜ್ಯಗಳ ಗಡಿಯಲ್ಲಿ ಅಕ್ರಮ ಗಣಿಗಾರಿಕೆಯ ಆರೋಪ ಕೇಳಿ ಬಂದಿತ್ತು. ಆಂಧ್ರ ಮತ್ತು ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊAಡ ಬಳ್ಳಾರಿ ಜಿಲ್ಲೆಯ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ೬೮.೫ ಹೆಕ್ಟೇರ್ ಮತ್ತು ೩೯.೫ ಹೆಕ್ಟೇರ್ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆಗಳನ್ನು
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ಅಕ್ರಮವಾಗಿ ಜಿ.ಜನಾರ್ದನರೆಡ್ಡಿ ಒಡೆತನದ ಓಎಂಸಿಗೆ ಹಂಚಿಕೆ ಮಾಡಲಾಗಿದೆ. ಅದಿರು ಬಗೆಯಲು ಆಂಧ್ರ ಪ್ರದೇಶದ ಪರ್ಮಿಟ್ ಪಡೆದು ರಾಜ್ಯದ ಗಡಿರೇಖೆಯನ್ನು ದ್ವಂಸ ಮಾಡಿ ಅಕ್ರಮ ಅದಿರು ತೆಗೆಯಲಾಗಿದೆ ಎನ್ನುವ ದೂರುಗಳಿದ್ದವು. ತನಿಖೆ ನೆಡಸಿದ್ದ ಸಿಬಿಐ ಅಧಿಕಾರಿಗಳು ಡಿ ಹಿರೇಹಾಳ್ ಮತ್ತು ರಾಯದುರ್ಗಂ ಬ್ಲಾಕ್ಗಳನ್ನು ಓಎಂಸಿಗೆಗೆ ವಂಚನೆಯ ಮೂಲಕ ನೀಡಲಾಗಿದೆ ಎನ್ನುವುದನ್ನು ಪತ್ತೆ ಹೆಚ್ಚಿದ್ದರು.
೮೮೪.೧೩ ಕೋಟಿ ಲೂಟಿ: ಅಂದಿನ ಆಂಧ್ರ ಸರಕಾರದ ಕೈಗಾರಿಕಾ ಕಾರ್ಯದರ್ಶಿ ವೈ ಶ್ರೀಲಕ್ಷ್ಮಿ ಮತ್ತು ಸಚಿವೆ ಸಬಿತಾ ಇಂದ್ರ ರೆಡ್ಡಿ ಅವರು ಓಎಂಸಿ ಕಂಪನಿಗೆ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ್ದರು. ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಕರ್ನಾಟಕದ ಅರಣ್ಯ ಭೂಮಿ ಸೇರಿದಂತೆ ಗುತ್ತಿಗೆ ಪ್ರದೇಶಗಳನ್ನು ಮೀರಿ ಗಾಲಿ & ಕಂಪನಿ ಅಕ್ರಮವಾಗಿ ಕಬ್ಬಿಣದ ಅದಿರು ಉತ್ಪಾದನೆಗೆ ನೆರವಾಗಿದ್ದರು. ಇದರಿಂದ ಸುಮಾರು ೨೯ಲಕ್ಷ ಟನ್ ಅದಿರನ್ನು ಅಕ್ರಮವಾಗಿ ಬಗೆದು ೮೮೪ ಕೋಟಿ ರೂ. ಆದಾಯವನ್ನು ಅಕ್ರಮವಾಗಿ ಓಎಂಸಿ ಗಳಿಸಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.
ಪ್ರಕರಣದ ಪೂರ್ವಪರ
ಆಂಧ್ರದಿAದ ಕರ್ನಾಟಕಕ್ಕೆ ಅಕ್ರಮ ಅದಿರು ಸಾಗಣೆ ಆಗುತ್ತಿದೆ ಇದನ್ನು ತಡೆಯಬೇಕು ಎಂದು ಉಲ್ಲೇಖಿಸಿ, ೨೦೦೯ರಲ್ಲಿ ಆಂಧ್ರದ ಅನಂತಪುರA ಜಿಲ್ಲೆಯ ಡಿಎಫ್ಓ ಬಳ್ಳಾರಿಯ ಡಿಎಫ್ಓ ಅವರಿಗೆ ಪತ್ರ ಬರೆದಿದ್ದರು. ಇದರ ಮೇಲೆ ಓಎಂಸಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ತನಿಖೆಗೆ ಒಳಪಡಿಸಲು ಆಂಧ್ರದ ಪ್ರತಿಪಕ್ಷಗಳು ಅಂದು ಸದನದಲ್ಲಿ ತನಿಖೆಗೆ ಆಗ್ರಹಿಸಿದ್ದವು. ಅಂದಿನ ಮುಖ್ಯಂಮತ್ರಿ ಕಾಂಗ್ರೆಸ್ ನ ರೋಷಯ್ಯ ಅವರು ೨೦೦೯ ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದರು.
ಗಡಿ ಒತ್ತುವರಿ ದಾಖಲೆಗಳಿಂತ ಸಾಭೀತಾದ ಹಿನ್ನೆಲೆಯಲ್ಲಿ ಸಿಬಿಐನ ಅಧಿಕಾರಿ ಲಕ್ಷ್ಮಿನಾರಾಯಣ ೨೦೧೧ ರ ಸೆಪ್ಟೆಂಬರ್ ೫ ರಂದು ಬಳ್ಳಾರಿಯಲ್ಲಿದ್ದ ಜನಾರ್ದನರೆಡ್ಡಿ ಮತ್ತು ಶ್ರೀನಿವಾಸರೆಡ್ಡಿ ಅವರನ್ನು ಬಂಧಿಸಿ ಚಂಚಲಗುಡ ಜೈಲಿಗೆ ಕಳುಹಿಸಿದ್ದರು. ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ
ಅನುಭವಿಸಿದ ಜನಾರ್ದನ ರೆಡ್ಡಿ ಜಾಮೀನು ಬಳಿಕ ಹೊರ ಬಂದರು.
ಪ್ರಕರಣದಲ್ಲಿ ಭಾಗಿದಾರರು
ಓಎಂಸಿ ಗಡಿ ಒತ್ತುವರಿ, ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಗಳಲ್ಲಿ ಕರ್ನಾಟಕದ ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ, ಬಿ.ವಿ. ಶ್ರೀನಿವಾಸ ರೆಡ್ಡಿ (ಒಎಂಸಿ ವ್ಯವಸ್ಥಾಪಕ ನಿರ್ದೇಶಕ), ಅಲಿ ಖಾನ್ (ರೆಡ್ಡಿ ಆಪ್ತ ಸಹಾಯಕ), ವಿ.ಡಿ. ರಾಜಗೋಪಾಲ್ (ಗಣಿ ಇಲಾಖೆಯ ಮಾಜಿ ನಿರ್ದೇಶಕ), ಕೃಪಾನಂದA (ನಿವೃತ್ತ ಐಎಎಸ್ ಅಧಿಕಾರಿ), ಸಬಿತಾ ಇಂದ್ರಾ ರೆಡ್ಡಿ (ತೆಲಂಗಾಣ ಸಚಿವೆ), ವೈ. ಶ್ರೀಲಕ್ಷ್ಮಿ (೨೦೨೨ ರಲ್ಲಿ ಬಿಡುಗಡೆಯಾದ ಐಎಎಸ್ ಅಧಿಕಾರಿ) ಮತ್ತು ಈಗ ನಿಧನರಾದ ಆರ್. ಲಿಂಗರೆಡ್ಡಿ (ಗಣಿ ಇಲಾಖೆಯ ಸಹಾಯಕ ನಿರ್ದೇಶಕಿ) ಸೇರಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ ೧೨೦ ಬಿ (ಕ್ರಿಮಿನಲ್ ಪಿತೂರಿ), ೪೨೦ (ವಂಚನೆ), ೪೦೯ (ಕ್ರಿಮಿನಲ್ ನಂಬಿಕೆ ದ್ರೋಹ), ೪೬೮ & ೪೭೧ (ನಕಲಿ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ ೧೩(೨) & ೧೩(೧)(ಡಿ) ಅಡಿಯಲ್ಲಿ ಚಾರ್ಜ್ಗಳಿವೆ.
೧೩ವರ್ಷಗಳ ಬಳಿಕ ತೀರ್ಪು
ಪ್ರಕರಣದಲ್ಲಿ ೩೪೦೦ ಕ್ಕೂ ಹೆಚ್ಚು ದಾಖಲೆಗಳ ಪರಿಶೀಲನೆ ನಡೆಸಲಾಗಿದ್ದು, ೨೧೯ ಕ್ಕೂ ಹೆಚ್ವು ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ. ಉದ್ಯಮಿ ಟಪಾಲ್ ಗಣೇಶ ಮತ್ತವರ ಸಹೋದರ ಏಕಾಂಬರA ಪ್ರಮುಖ ಸಾಕ್ಷಿಯಾಗಿದ್ದಾರೆ. ೧೩ ವರ್ಷದ ಬಳಿಕ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬಂದಿದೆ.
ಸೆ.೬ರAದು ತೀರ್ಪು ಹೊರ ಬೀಳಲಿದೆ. ಹೀಗಾಗಿ ಈಗಷ್ಟೇ ಜೈಲುವಾಸ ಮರೆತು ರಾಜಕೀಯ ಮುಜನ್ಮ ಪಡೆದ ಜನಾರ್ದನರೆಡ್ಡಿ ಸೇರಿ ಓಬಳಾಪೂರಂ ಮೈನಿಂಗ್ ಕೇಸ್ನಲ್ಲಿ ಭಾಗಿಯಾದವರ ಪಾಲಿಗೆ ಮೇ.೬ರ ಮಹತ್ವದ ದಿನವಾಗಿದೆ. ಪ್ರಕರಣದಲ್ಲಿ ಕ್ಲೀನ್ಚೀಟ್ ಸಿಗಲಿದೆಯೋ? ಮತ್ತೆ ಜೈಲು ಗತಿಯಾಗಲಿದೆಯೋ? ಕಾದು ನೋಡಬೇಕಿದೆ.