ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರನ್ನು ಸಿನಿಮಾಪ್ರೇಮಿಗಳಿಗೆ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ ಬಿಡಿ. ದೇಶ ವಿದೇಶಗಳಲ್ಲಿಯೂ ಬಾದ್ ಷಾ ಅಭಿಮಾನಿಗಳಿದ್ದಾರೆ. ಆದ್ರೆ ಪತ್ರಕರ್ತರೊಬ್ಬರು ನೀವು ಯಾರೆಂದ ಘಟನೆ ನಡೆದಿದ್ದು, ಕಿಂಗ್ ಖಾನ್ ಬೇಸರ ಮೂಡಿಸಿದೆ.
ಅತಿದೊಡ್ಡ ಫ್ಯಾಷನ್ ಹಬ್ಬ ಎನಿಸಿಕೊಳ್ಳುವ ಮೆಟ್ ಗಾಲಾ ಮತ್ತೆ ಶುರುವಾಗಿದೆ. ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಈ ಫ್ಯಾಷನ್ ಇವೆಂಟ್ ನಲ್ಲಿ ದೇಶ ವಿದೇಶಗಳ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಭಾರತದಿಂದ ಬಾಲಿವುಡ್ ಕಿಂಗ್ ಖಾನ್ ಶಾರುಖ್, ನಟಿ ಕಿಯಾರಾ ಅಡ್ವಾನಿ, ದಿಲ್ಜಿತ್ ದೋಸಾಂಜ್ ಮೆಟ್ ಗಾಲಾಗೆ ರಂಗು ತುಂಬಿದ್ದಾರೆ.
ಮೆಟ್ ಗಾಲಾ ರೆಡ್ ಕಾರ್ಪೆಟ್ನಲ್ಲಿ ಶಾರುಖ್ ಸ್ಟೈಲೀಶ್ ಆಗಿ ಕ್ಯಾಮೆರಾಗೆ ಕಣ್ಣು ಕೊಡಿದ್ದಾರೆ. ಸಬ್ಯಸಾಚಿ ಮುಖರ್ಚಿ ಅವರಿಂದ ತಯಾರಾದ ಡಿಸೈನರ್ ಬಟ್ಟೆಯಲ್ಲಿ ಕಿಂಗ್ ಸಖತ್ ಆಗಿ ಮಿಂಚಿದ್ದಾರೆ. ವಿಲನ್ ಖದರ್ ನಲ್ಲಿ ಕತ್ತಿನ ಮೇಲೆ ಚಿತ್ರ-ವಿಚಿತ್ರ ಮಣಿ ಸರಗಳನ್ನು ಶಾರುಖ್ ಮಿಂಚಿದ್ದಾರೆ.
ಶಾರುಖ್ ಖಾನ್ ಅವರು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿರುವ ವಿಡಿಯೋಗಳು ವೈರಲ್ ಆಗಿವೆ. ವೈರಲ್ ವಿಡಿಯೋವೊಂದರಲ್ಲಿ ಕಿಂಗ್ ಖಾನ್ ಗೆ ನೀವು ಯಾರೆಂದು ಪತ್ರಕರ್ತರೊಬ್ಬರು ಕೇಳಿದ್ದಾರೆ. ಅದಕ್ಕೆ ಶಾರುಖ್, ಹಾಯ್ ನಾನು ಶಾರುಖ್ ಖಾನ್ ಎಂದಿದ್ದಾರೆ. ಒಬ್ಬ ಸೂಪರ್ ಸ್ಟಾರ್ ಆಗಿದ್ರೂ ತಮ್ಮನ್ನು ತಾವು ಶಾರುಖ್ ಖಾನ್ ಪರಿಚಯಸಿಕೊಂಡ ರೀತಿ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
Shah Rukh Khan, and His Jeweled Tiger’s Head, Make Their Met Debut 🖤🔥
KING KHAN AT MET GALA #ShahRukhKhan #MetGala2025 pic.twitter.com/VsZYQNScxM
— Shah Rukh Khan Warriors FAN Club (@TeamSRKWarriors) May 5, 2025