ಬಾಗಲಕೋಟೆ: ಜಿಲ್ಲೆಯ ತೇರದಾಳ ನಗರದ ಪ್ರತಿಷ್ಠಿತ ವಿದ್ಯಾ ತರಬೇತಿ ಕೇಂದ್ರವಾದ ಖೋತ ಇಂಗ್ಲೀಷ್ ಟ್ಯುಟೋರಿಯಲ್ ತೇರದಾಳ ಇಲ್ಲಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮತ್ತು ಕಳೆದ ವರ್ಷ ಈ ಸಂಸ್ಥೆಯಲ್ಲಿ ತರಬೇತಿ ಪಡೆದು ಎಸ್ ಎಸ್ ಎಲ್ ಸಿ, ಎನ್ ಎನ್ ಎಂ ಎಸ್ ಮತ್ತು ಮೊರಾರ್ಜಿ ವಸತಿ ಶಾಲೆಗಳ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
Mandya: ಮದ್ದೂರಿನಲ್ಲಿ ನಡೆದ ಬೃಹತ್ ತಿರಂಗಾ ಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ!
ಈ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿ ನಿಂಬೆಕ್ಕ ಕಥೋಡಿ ಎಸ್ ಎಸ್ ಎಲ್ ಸಿ ಯಲ್ಲಿ 615 ಅಂಕಗಳನ್ನು ಪಡೆದು ರಾಜ್ಯಕ್ಕೆ 11 ನೆಯ ಸ್ಥಾನ ಪಡೆದಿದ್ದಾಳೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಶ್ರೀ ಡಾ. ಮಹಾಂತಪ್ರಭು ಸ್ವಾಮೀಜಿಗಳು ವಿರಕ್ತಮಠ ಶೇಗುಣಸಿ ಅಜ್ಜರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಸಾಧಕ ಮಕ್ಕಳಿಗೆ ಆಶೀರ್ವದಿಸಿ ಸಂಸ್ಥೆಯ ಸಾಧನೆಗೆ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ನಾಮದೇವ ಸೋಪಾನ ಖೋತ ಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ವರ್ಷದಿಂದ ಈ ನಗರ ಮತ್ತು ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗಾಗಿ ಶಾಲಾ ಅವಧಿಯನ್ನು ಹೊರತು ಪಡಿಸಿ ವಸತಿ ರಹಿತ ನವೋದಯ, ಸೈನಿಕ ಮುಂತಾದ ತರಗತಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಗೌರವ ಅಥಿತಿಗಳಾಗಿ ತೇರದಾಳ ಪೊಲೀಸ್ ಠಾಣೆಯ ಅಪರಾದ ವಿಭಾಗದ ಪೊಲೀಸ್ ಠಾಣಾ ಅಧಿಕಾರಿಗಳಾದ ಶ್ರೀ ಪಿ ಬಿ ಪೂಜಾರಿ, ಗೋಲಬಾವಿಯ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಬಿ ಬಿ ಕುದರಿಮನಿ, ಹಿರಿಯ ಶಿಕ್ಷಕರಾದ ಶ್ರೀ ಎಸ್ ಬಿ ಮೊಮಿನ್ ಮತ್ತು ಶ್ರೀ ಗೋಪಾಲ ಮಾಳಗೆ ಹಾಗೂ ಪತ್ರಕರ್ತರಾದ ಶ್ರೀ ಪ್ರಭು ಜೈನರ ಉಪಸ್ಥಿತರಿದ್ದರು.
ಕಾರ್ಯಕ್ರಮ ಶಾಂತಿ ಸುವ್ಯವಸ್ಥಿತವಾಗಿ ನಡೆಯಲು ತೇರದಾಳ ಪೊಲೀಸ್ ಠಾಣೆಯ ಅಧಿಕಾರಿಗಳಾದ ಶ್ರೀ ಅಪ್ಪಣ್ಣ ಐಗಳಿ ಹಾಗೂ ಪೊಲೀಸ್ ಠಾಣಾ ಸಿಬ್ಬಂದಿ ಶ್ರೀ ಮಲ್ಲಿಕಾರ್ಜುನ ಕೆಂಚನ್ನವರ ಸಹಕರಿಸಿದರು.
ಸಂಸ್ಥೆಯ ಸಂಸ್ಥಾಪಕರಾದ ಶ್ರೀ ಮುರಳೀಧರ ಖೋತ, ಸಹ ಶಿಕ್ಷಕಿಯರಾದ ಶ್ರೀಮತಿ ಸೌಭಾಗ್ಯ ಖೋತ ,ಕುಮಾರಿ ನಿರ್ಮಲಾ ಯಲ್ಲಟ್ಟಿ ಮತ್ತು ಭುವನೇಶ್ವರಿ ಭೃಂಗಿಮಠ, ಶಿಕ್ಷಕರಾದ ಶ್ರೀ ಪ್ರಮೋದ ಸಂತಿ ಶ್ರೀ ಬರ್ಮು ಡಂಗ ಶ್ರೀಮಲ್ಲಿಕಾರ್ಜುನ ಮದುವಾಲ , ಪಾಲಕರು ಮತ್ತು ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಬಾಗಿ ಆಗಿದ್ದರು.